ಪುತ್ತೂರು: ಬಡಗನ್ನೂರು ಆದಿದೈವ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರೆ ಗುರುಪೀಠ, ದೇಯಿಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನವಾಗಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಮಾ.16 ರಿಂದ 20ರ ವರೆಗೆ ವಿಜ್ರಂಭಣೆಯ ವಾರ್ಷಿಕ ಜಾತ್ರಾ ಮಹೋತ್ಸವು ಮೂಡಬಿದ್ರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಸಲಾಗುತ್ತಿದೆ.
ಮಾ.16 ರಂದು ಸಂಜೆ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ ಸಾಮೂಹಿಕ ಪ್ರಾರ್ಥನೆ, ಹೊರೆ ಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಕೃಪಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ ಇವರಿಂದ ‘ನಾಳದಪ್ಪೆ ಉಳ್ಳಾಲ್ತಿ’, ಮಾ.17 ರಂದು ಬೆಳಿಗ್ಗೆ ತ್ರಿನಾರಿಕೇಳ, ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನಿಧ್ಯದಲ್ಲಿ ಶುದ್ಧಿಹೋಮ, ಕಲಶಾಭಿಷೇಕ, ಆಶ್ಲೇಷ ಬಲಿ, ಪ್ರಸನ್ನಪೂಜೆ, ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ನವನ ಪ್ರಧಾನ, ಒದಗುವ ವೃಷಭ ಲಗ್ನ ಸುಮೂಹರ್ತದಲ್ಲಿ ಧ್ವಜಾರೋಹಣ, ಪಂಚಪರ್ವ ಸೇವೆ ಅಲಂಕಾರ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ಬಳಿಕ ಭಜನಾ ಸಂಕೀರ್ತನೆ, ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ, ಭಜನಾ ಸಂಕೀರ್ತನೆ, ಸಂಜೆ ದೂಮಾವತಿ ಬಲಿ ಉತ್ಸವ ಧರ್ಮ ಚಾವಡಿಯಲ್ಲಿ ಭಗವತಿ ಸೇವೆ ಮಹಾಪೂಜೆ ನಡೆಯಲಿದೆ.
ಮಾ.18 ರಂದು ಬೆಳಿಗ್ಗೆ ಗಣಪತಿ ಹೋಮ, ಗುರುಪೂಜೆ, ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ಶುದ್ಧಕಲಶ ಹೋಮ, ಧೂಮಾವತಿ ನೇಮೋತ್ಸವ, ಮಧ್ಯಾಹ್ನ ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಧೂಮಾವತ ಬಲಿ ಉತ್ಸವ, ಸಂಜೆ ಕಲ್ಲಾಲ್ದಾಯ ನೇಮೋತ್ಸವ, ರಾತ್ರಿ ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, ಕೊರತಿ ದೈವದ ನರ್ತನ ಸೇವೆ, ಕುಪ್ಪೆ ಪಂಜುರ್ಲಿ ನೇಮೋತ್ಸವ ಜರಗಲಿದೆ.
ಮಾ.19ರಂದು ಬೆಳಿಗ್ಗೆ ಗಣಹೋಮ, ಗುರುಪೂಜೆ ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯ ಧರ್ಮ ಚಾವಡಿಯಲ್ಲಿ ನವಕ ಕಲಶ, ಪ್ರಧಾನಹೋಮ, ಅಲಂಕಾರ ಪೂಜೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ಸತ್ಯ ಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ, ಧೂಮಾವತಿ ಬಲಿ ಉತ್ಸವ, ರಾತ್ರಿ ಸತ್ಯ ಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ, ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು, ಸತ್ಯ ಧರ್ಮ ಚಾವಡಿಯಲ್ಲಿ ದೇಯಿಬೈದೆತಿ ನೇಮೋತ್ಸವ ಮಾತೆ ಮಕ್ಕಳ ಪುನೀತ ಸಮಾಗಮ, ದೇವಿ ಬೈದೆತಿಯ ಪ್ರಸಾದ ವಿತರಣೆ, ಬ್ರಹ್ಮ ಬೈದರ್ಕಳ ನೇಮೋತ್ಸವ ಸಮಾಧಿಯಲ್ಲಿ ದೀಪಾರಾಧನೆ, ಮಾ.20 ರಂದು ಬೆಳಿಗ್ಗೆ ಗಣಹೋಮ, ಎಲ್ಲಾ ಸಾನಿಧ್ಯಗಳಲ್ಲಿ ಶುದ್ಧಿಕಲಶ ಹೋಮ, ಧ್ವಜಾವರೋಹಣ, ಗುರುಪೂಜೆ, ಪ್ರಸಾದ ವಿತರಣೆ ಜರಗಲಿದೆ. ಈ ಪುಣ್ಯ ಕಾರ್ಯಕ್ಕೆ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ಶ್ರೀ ಕ್ಷೇತ್ರದ ದೇಯಿಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೆಜ್ಜೆಗಿರಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಅನುವಂಶಿಕ ಮೊಕ್ತೇಸರರು, ನೇಮೋತ್ಸವ ಸಮಿತಿ ಸಂಚಾಲಕರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.16:ಹೊರೆ ಕಾಣಿಕೆ ಸಮರ್ಪಿಸಲು ಮನವಿ..
ಹೊರೆ ಕಾಣಿಕೆಗೆ ಪ್ರತಿ ಮನೆಯಿಂದ ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೆ ಎಲೆ, ಬಾಳೆಗೊನೆ, ಸೀಯಾಳ, ದನದ ತುಪ್ಪ, ಎಣ್ಣೆ, ಹಿಂಗಾರ, ಹೂ, ತುಳಸಿ ಇತ್ಯಾದಿ ವಸ್ತುಗಳನ್ನು ನೀಡಿ ಸಹಕರಿಸುವುದು. ಪ್ರತಿ ತಾಲೂಕಿನಿಂದ ಹೊರೆ ಕಾಣಿಕೆಯನ್ನು ದಿನಾಂಕ 16-03-2023ರ ಸಂಜೆ ಆರು ಗಂಟೆಯೊಳಗೆ ಶ್ರೀ ಕ್ಷೇತ್ರಕ್ಕೆ ತಲುಪಿಸತಕ್ಕದ್ದು. ಹೊರೆ ಕಾಣಿಕೆಯ ನೇತೃತ್ವವನ್ನು ಡಾ|ರವಿ ಕಕ್ಯಪದವು(೯೪೪೯೨೮೩೯೭೪) ವಹಿಸಲಿದ್ದಾರೆ.
ಶ್ರೀ ಕ್ಷೇತ್ರದಲ್ಲಿನ ವಾರ್ಷಿಕ ನಡಾವಳಿಗಳು..
-ಪ್ರತಿದಿನ ತ್ರಿಕಾಲ ಪೂಜೆ ಮತ್ತು ಮಧ್ಯಾಹ್ನ ಪೂಜೆಯ ನಂತರ ಅನ್ನಪ್ರಸಾದ ವಿತರಣೆ ನಡೆಯಲಿರುವುದು.
-ಪ್ರತಿ ಸಂಕ್ರಮಣ ದಿನ ನಾಗದೇವರಿಗೆ ತನು ತಂಬಿಲ ಹಾಗೂ ವಿಶೇಷ ಪೂಜೆ ಮಂಗಳಾರತಿ ಎಲ್ಲಾ ಸಾನಿಧ್ಯಗಳಲ್ಲಿ ನಡೆಯಲಿರುವುದು.
-ಪ್ರತಿಷ್ಠಾವರ್ಧಂತಿಯ ಪ್ರಯುಕ್ತ ಫೆಬ್ರವರಿ 28 ರಂದು ಗಣಹೋಮ, ತನು ತಂಬಿಲ, ನವಕ ಕಲಶ ಹಾಗೂ ಹೋಮ, ಶುದ್ಧಿ ಹೋಮ, ಪರ್ವ ಸೇವೆ, ಪ್ರಸನ್ನ ಪೂಜೆ, ಮಂಗಳಾರತಿ ನಡೆಯಲಿರುವುದು.