ರಾಮಕುಂಜ: 2022ರ ಸೆಪ್ಟಂಬರ್/ಅಕ್ಟೋಬರ್ ತಿಂಗಳಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ಎಂ.ಕಾಂ.ಪರೀಕ್ಷೆಯಲ್ಲಿ 5ನೇ ರ‍್ಯಾಂಕ್ ಪಡೆದ ರಾಮಕುಂಜ ಗ್ರಾಮದ ಬಾರಿಂಜ ನಿವಾಸಿ ಚೈತ್ರಾ ಅವರನ್ನು ಆಲಂಕಾರು ವಲಯ ಒಕ್ಕಲಿಗ ಗೌಡ ಸಂಘದ ವತಿಯಿಂದ ಬಾರಿಂಜ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆಲಂಕಾರು ವಲಯ ಒಕ್ಕಲಿಗ ಗೌಡ ಹಿರಿಯ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಮಹಾಲಿಂಗೇಶ್ವರ ಐಟಿಐ ನಿವೃತ್ತ ಪ್ರಾಂಶುಪಾಲ ಭವಾನಿಶಂಕರ ಗೌಡ ಪರಂಗಾಜೆ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಆಲಂಕಾರು ವಲಯ ಒಕ್ಕಲಿಗ ಗೌಡ ಯುವ ಸಮಿತಿ ಗೌರವಾಧ್ಯಕ್ಷ ಚಕ್ರಪಾಣಿ ಬಾಕಿಲ ಅಭಿನಂದಿಸಿದರು. ಜೆಸಿಐ ವಲಯ ತರಬೇತುದಾರರಾದ ಪ್ರದೀಪ್ ಬಾಕಿಲ ಅವರು ಪರಿಚಯಿಸಿದರು. ಸ್ಮರಣಿಕೆ, ಫಲವಸ್ತು ನೀಡಿ, ಹಾರಾರ್ಪಣೆ, ಶಾಲು ಹಾಕಿ ಚೈತ್ರಾರನ್ನು ಒಕ್ಕಲಿಗ ಗೌಡ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈಶ್ವರ ಗೌಡ ಬಾರಿಂಜ, ಸರಸ್ವತಿ ಬಾರಿಂಜ, ಶ್ರೀಮತಿ ಲಕ್ಷ್ಮೀ ಬಾರಿಂಜ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ ಪಜ್ಜಡ್ಕ, ಆಲಂಕಾರು ಜೆಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಪೆರಾಬೆ ಗ್ರಾ.ಪಂ.ಸದಸ್ಯ ಸದಾನಂದ ಗೌಡ ಕುಂಟ್ಯಾನ, ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಗೌಡ ಕುಂತೂರು, ಕೇಶವ ಗೌಡ ಆಲಡ್ಕ, ಶೇಖರ ಗೌಡ ಕಟ್ಟಪುಣಿ, ದಯಾನಂದ ಗೌಡ ಆಲಡ್ಕ, ಶಿವಣ್ಣ ಗೌಡ ಕಕ್ವೆ, ತಿಮ್ಮಪ್ಪ ಗೌಡ ಸಂಕೇಶ, ಪೂವಪ್ಪ ಗೌಡ ಸಂಪ್ಯಾಡಿ, ಶಾಂತಿನಗರ ಶಾಲಾ ಶಿಕ್ಷಕ ಮಂಜುನಾಥ ಮಣಕವಾಡ ಮತ್ತಿತರರು ಉಪಸ್ಥಿತರಿದ್ದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ.,ಸ್ವಾಗತಿಸಿದರು. ಸಿಆರ್‌ಪಿ ಪ್ರಕಾಶ್ ಬಾಕಿಲ ವಂದಿಸಿದರು. ಆಲಂಕಾರು ವಲಯ ಒಕ್ಕಲಿಗ ಗೌಡ ಯುವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ನಿರೂಪಿಸಿದರು.