ತಾಳ್ಮೆ, ಸಹನೆ ಯಶಸ್ಸಿನ ಸೂತ್ರ- ಪ್ರಶಾಂತ್ ಮುಕ್ವೆ
ಪುತ್ತೂರು: ಆಧುನಿಕ ಜಗತ್ತಿನಲ್ಲಿ ತಾಳ್ಮೆ, ಸಹನೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಯಶಸ್ಸನ್ನು ಪಡೆಯಲು ಇವೆರಡು ಪ್ರಮುಖವಾದ ಮೆಟ್ಟಿಲುಗಳು ಎಂದು ವಿವೇಕಾನಂದ ಪಾಲಿಟೆಕ್ನಿಕ್ ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕ ಪ್ರಶಾಂತ ಆಚಾರ್ಯ ಮುಕ್ವೆ ಹೇಳಿದರು.
ಬೊಳ್ವಾರಿನ ವಿಶ್ವಕರ್ಮ ಸಭಾಭವನದಲ್ಲಿ ನಡೆದ ವಿಶ್ವಕರ್ಮ ಯುವ ಸಮಾಜ ಮತ್ತು ವಿಶ್ವ ಬ್ರಾಹ್ಮಣ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾಳ್ಮೆ, ಸಹನೆಯ ಜೊತೆಗೆ ಧನಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಟೀಕೆಯನ್ನು ಮೆಟ್ಟಿ ನಿಲ್ಲಲು ಧನಾತ್ಮಕ ಭಾವನೆಗಳೇ ನಮಗೆ ನೆರವಾಗುತ್ತವೆ ಎಂದ ಅವರು, ನಿಸ್ವಾರ್ಥ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದರು.
ನಿವೃತ್ತ ಪತ್ರಾಂಕಿತ ಖಜಾನಾಧಿಕಾರಿ ವಿಠಲಾಚಾರಿ ದೀಪ ಬೆಳಗಿಸಿದರು.
ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಯುವ ಸಮಾಜ ಸದೃಢವಾಗಿ ಬೆಳೆಯಲು ಸದಸ್ಯರ ಸಹಕಾರವನ್ನು ಕೋರಿದರು.
ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಎಸ್.ಎನ್. ಮಾತನಾಡಿ, ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕೆಲಸವನ್ನು ಸಾಧಿಸುವ ತುಡಿತ ಹೊಂದಿದಾಗ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಸಮಾಜ ಬಾಂಧವರು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಾಗ ತಾವು ಬೆಳೆಯುವುದರ ಜೊತೆಗೆ ಸಂಘಟನೆಗಳು ಬೆಳೆಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿನೇಶ್ ಆಚಾರ್ಯ, ಮರೋಳಿ ಬಾಲಕೃಷ್ಣ ಆಚಾರ್ಯ ಅವರನ್ನು ವಿಶ್ವ ಬ್ರಾಹ್ಮಣ ಸೇವಾ ಸಂಘದ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು. ಬಿ.ಎಡ್.ನಲ್ಲಿ 8ನೇ ರ್ರಾಂಕ್ ಪಡೆದ ವೃದ್ಧಿ ಎಂ.ಅವರನ್ನು ಗೌರವಿಸಲಾಯಿತು. ರೋಟರಿ ಯುವದ ಅಧ್ಯಕ್ಷೆ ರಾಜೇಶ್ವರಿ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ನೇಮಕವಾಗಿರುವ ರಾಹುಲ್ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೇಯಸ್ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಉಮೇಶ್ ನಿರ್ವಹಿಸಿದರು.
ವಿಶ್ವಕರ್ಮ ಯುವ ಸಮಾಜದ ಆಡಳಿತ ಮಂಡಳಿ ಸದಸ್ಯರ ಪ್ರಕಟಣೆಯನ್ನು ಸುರೇಶ ಆಚಾರ್ಯ ಕಾಣಿಯೂರು ವಾಚಿಸಿದರು. ವಿಶ್ವ ಬ್ರಾಹ್ಮಣ ಸೇವಾ ಸಂಘದ ಆಡಳಿತ ಮಂಡಳಿ ಸದಸ್ಯರ ಪ್ರಕಟಣೆಯನ್ನು ಉಷಾ ಸದಾನಂದ ಆಚಾರ್ಯ ವಾಚಿಸಿದರು.
ಶ್ರೀನಿವಾಸ್ ಆಚಾರ್ಯ ಪಡೀಲ್ ಪ್ರಾರ್ಥಿಸಿದರು. ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಜಗದೀಶ್ ಆಚಾರ್ಯ ಮಾಮೇಶ್ವರ ಹಾಗೂ ವಿಶ್ವ ಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಆಚಾರ್ಯ ಕೊಕ್ಕಡ ವರದಿ ವಾಚಿಸಿದರು. ವಿಶ್ವಕರ್ಮ ಯುವ ಸಮಾಜದ ಲೆಕ್ಕಪತ್ರವನ್ನು ಕೋಶಾಧಿಕಾರಿ ವಸಂತ್ ಬೊಳ್ವಾರ್ ಮಂಡಿಸಿದರು. ವಿಶ್ವ ಬ್ರಾಹ್ಮಣ ಸೇವಾ ಸಂಘದ ಲೆಕ್ಕಪತ್ರವನ್ನು ಕೋಶಾಧಿಕಾರಿ ರಮೇಶ ಆಚಾರ್ಯ ಮಾಮೇಶ್ವರ ಮಂಡಿಸಿದರು. ಭುಜಂಗ ಆಚಾರ್ಯ ಸ್ವಾಗತಿಸಿದರು. ಶಾಂತಲಾ ನಾರಾಯಣ ಆಚಾರ್ಯ ಮುಖ್ಯ ಅತಿಥಿಗಳನ್ನು ಗೌರವಿಸಿದರು. ಲಕ್ಷ್ಮಣ ಆಚಾರ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಸುರೇಂದ್ರ ಆಚಾರ್ಯ ವಂದಿಸಿದರು. ಆನಂದ ಆಚಾರ್ಯ ಅಜ್ಜಿನಡ್ಕ, ಕಿಶನ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.