ಕಾವು : ಕಾವು ಪಠೇಲ್ ವೆಂಕಟ್ರಮಣಯ್ಯ ಮತ್ತು ಕಾವೇರಿಯಮ್ಮನವರ ಮೊಮ್ಮಗ ಕಾವು ನಿಧಿಮುಂಡ ಕೆ. ವೆಂಕಟ್ರಾವ್‌ರವರ ಸ್ಮರಣಾರ್ಥ ಪತ್ನಿ ಕಾವೇರಿಯಮ್ಮ ಮತ್ತು ಮಕ್ಕಳು, ಕೆ. ರಘುರಾಮ ರಾವ್ ಮತ್ತು ಸಹೋದರರ ಸೇವಾರ್ಥವಾಗಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಭೋಜನ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಮಾ.22ರಂದು ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ಬಳಿಕ ರುದ್ರ ಹೋಮ ನಡೆಸಿ ಧಾರ್ಮಿಕ ವಿಧಿವಿಧಾನಗಳ ಮೂಲಕ ನೂತನ ಭೋಜನ ಶಾಲೆಯನ್ನು ಸಮರ್ಪಣೆ ಮಾಡಲಾಯಿತು. ಕುಂಟಾರು ವಿಷ್ಣು ಪ್ರಸಾದ್ ತಂತ್ರಿಯವರು ದೀಪ ಬೆಳಗಿಸಿ ನೂತನ ಭೋಜನ ಶಾಲೆಯ ಉದ್ಘಾಟನೆ ಮಾಡಿದರು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡರವರು ಸ್ವಾಗತಿಸಿ ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಭೋಜನ ಶಾಲೆಯನ್ನು ಸೆವಾರ್ಥವಾಗಿ ನೀಡಿರುವ ಮನೆಯವರು, ಕುಟುಂಬಸ್ಥರು, ಕ್ಷೇತ್ರದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ, ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ, ಸಮಿತಿ ಸದಸ್ಯರುಗಳಾದ ಮಳಿ ರಾಮಚಂದ್ರ ಭಟ್, ಕೃಷ್ಣಪ್ರಸಾದ್ ಕೊಚ್ಚಿ, ಭಾಸ್ಕರ ಬಲ್ಯಾಯ, ಹೊನ್ನಪ್ಪ ಪೂಜಾರಿ, ಧನಂಜಯ ನಾಯ್ಕ, ನಿರ್ಮಲಾ ರೈ, ಪ್ರೇಮಾ ಗಂಗಾಧರ ಗೌಡ ಚಾಕೋಟೆ, ದೇವಳದ ಆಡಳಿತ ಸಮಿತಿ ಮಾಜಿ ಮೊಕ್ತೇಸರರಾದ ಕಾವು ಹೇಮನಾಥ ಶೆಟ್ಟಿ, ದಿವ್ಯನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು.