ವಿಟ್ಲ: ನಗರೋತ್ಥಾನ ಮತ್ತು ನೀರಾವರಿ ಮಂಡಳಿಯಡಿ 19 ಲಕ್ಷ ಅನುದಾನದಲ್ಲಿ ಬಿಡುಗಡೆಗೊಂಡ ವಿಟ್ಲ ಪಟ್ಟಣ ಪಂಚಾಯತ್ ನ 2ನೇ ವಾರ್ಡ್ ನ ವಿಟ್ಲ ಐಟಿಐ ಮತ್ತು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜ್ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನಡೆಸಲಾಯಿತು.
ಪಟ್ಟಣ ಪಂಚಾಯತ್ ಸದಸ್ಯರಾದ ಸಂಗೀತಾ ಪಾಣೆಮಜಲು, ಅರುಣ್ ಎಂ ವಿಟ್ಲ, ಹರೀಶ್ ಸಿ.ಎಚ್, ಪ್ರಮುಖರಾದ ಹರೀಶ್ ಸೀಗೆಬಲ್ಲೆ, ರಾಮ್ ದಾಸ್ ಶೆಣೈ, ಜಗದೀಶ ಪಾಣೆಮಜಲು, ಜಗನ್ನಾಥ್ ಶೆಟ್ಟಿ ಕೋಡಿ, ಶಂಕರ ಸೀಗೆಬಲ್ಲೆ, ಜಯರಾಮ ಮೊದಲಾದವರು ಉಪಸ್ಥಿತರಿದ್ದರು.