ಪುತ್ತೂರು: ಫಿಲೋಮಿನಾ ಕಾಲೇಜು ಪುತ್ತೂರು ಇದರ 2014-17ನೇ ಸಾಲಿನ ಹಳೆ ವಿದ್ಯಾರ್ಥಿಗಳು ರಚಿಸಿರುವ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಇದರ ವತಿಯಿಂದ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಪುತ್ತೂರು ಕೇಂದ್ರ ಜುಮಾ ಮಸೀದಿಯ ಮದ್ರಸಾ ಹಾಲ್ನಲ್ಲಿ ನಡೆಯಿತು.
ಸೈಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾ ನೆರವೇರಿಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಂಡದ ಸದಸ್ಯರು ಸುಮಾರು 60 ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳನ್ನು ಗುರುತಿಸಿ ಪುತ್ತೂರು, ಈಶ್ವರಮಂಗಲ, ಸಂಪ್ಯ, ವಿಟ್ಲ, ಮಾಣಿ, ಸವಣೂರು, ಉಪ್ಪಿನಂಗಡಿ, ಕಡಬ, ಬೆಳ್ತಂಗಡಿ ಭಾಗದಲ್ಲಿ ಕಿಟ್ ವಿತರಿಸಿದರು.
ಐ.ಬಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಾತಿಶಾ ಆತೂರು ಅದ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಮಾಜಿ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಉಬಾರ್ ಡೋನರ್ಸ್ ಅಧ್ಯಕ್ಷ ಶಬೀರ್ ಕೆಂಪಿ, ದರ್ಬೆ ಚಾರಿಟೇಬಲ್ನ ಅರ್ಶದ್ ದರ್ಬೆ, ಎಸ್ವೈಎಫ್ನ ಮೋನು ಬಪ್ಪಳಿಗೆ, ಹಮೀದ್ ಮಿತ್ತೂರು ಹಾಗೂ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಮಹಮ್ಮದ್ ಸಲಿತ್, ಪ್ರ.ಕಾರ್ಯದರ್ಶಿ ನವಾಝ್ ಬಿ.ಸಿ, ಉಪಾದ್ಯಕ್ಷ ಆಶೀಕ್ ಕಲ್ಲರ್ಪೆ, ತಂಡದ ಸದಸ್ಯರಾದ ಮನ್ಸೂರ್, ನೌಶಾದ್, ಮುಸ್ತಫಾ ಹರ್ಷದ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸಲೀತ್ ಸ್ವಾಗತಿಸಿದರು.