ಪುತ್ತೂರು; ಪಾಲ್ತಾಡು ಗ್ರಾಮದ ಕೊರಗಜ್ಜ ದೈವದ ಸಾನ್ನಿಧ್ಯ ಕ್ಷೇತ್ರದಲ್ಲಿ ಮಾ.26,27 ಮತ್ತು 28 ರಂದು ನಾಗ, ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಕೊರಗಜ್ಜ ದೈವಗಳ ಪ್ರತಿಷ್ಠಾ ಕಾರ್ಯಕ್ರಮವು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ಮಾ. 26 ರಂದು ಸಂಜೆ 5 ಕ್ಕೆ ಪುಣ್ಯಾಹ, ದೇವತಾಪ್ರಾರ್ಥನೆ, ಪ್ರಸಾದ ಶುದ್ದಿ, ಸಪ್ತ ಶುದ್ದಿ, ಗೋಪೂಜೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲಕ ಬಲಿ, ಬಿಂಬ ಶುಧ್ಧಿ, 5.30 ಕ್ಕೆ ಧಾಲಶ ಪೂಜೆ, ನಾಗಪ್ರತಿಷ್ಠೆ, ಕೊರಗಜ್ಜ ಪ್ರತಿಷ್ಠೆ, ಅಶ್ಲೇಷ ಬಲಿ, ಪ್ರತಿಷ್ಠಾ ಹೋಮ, ಕಲಾಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನದಾನ.ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ಭಾಗ್ಯ ಜೋಡು ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಮಾ. 27 ರಂದು ಬೆಳಿಗ್ಗೆ ಮಹಾಗಣಪತಿ ಹೋಮ ನಡೆಯಲಿದೆ.
ಮಾ. 28 ರಂದು ರಾತ್ರಿ ಗಂಟೆ 8 ರಿಂದ ಕಲ್ಲುರ್ಟಿ, ಗುಳಿಗ ಮತ್ತು ಕೊರಗಜ್ಜ ದೈವಗಳ ನೇಮ ನಡೆಯಲಿದೆ.
ಮಾ.26,27 ರಂದು ವಿವಿಧ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ಅಧ್ಯಕ್ಷತೆ ವಹಿಸಲಿದ್ದು, ಪಾಲ್ತಾಡು ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರಾದ ಎಸ್ ಬಿ ಜಯರಾಮ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಹಕಾರಿ ರತ್ನ ದಂಬೆಕ್ಕಾನ ಸದಾಶಿವ ರೈ, ಕ್ಷೇತ್ರದ ಗೌರವಾಧ್ಯಕ್ಷರಾದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಸವಣೂರು ಕೆ ಸೀತಾರಾಮ ರೈ, ರವೀಂದ್ರ ಶೆಟ್ಟಿ ನುಳಿಯಾಲು, ದುರ್ಗಾಪ್ರಸಾದ್ ರೈ ಕುಂಬ್ರ, ಜಯಂತ್ ನಡುಬೈಲು, ಅನಿತಾ ಹೇಮನಾಥ ಶೆಟ್ಟಿ, ಆಶಾ ಭಂಡಾರಿ ಕುಂಬ್ರ, ಕೊಳ್ತಿಗೆ ಗ್ರಾಪಂ ಅಧ್ಯಕ್ಷರಾದ ಶ್ಯಾಂ ಸುಂದರ ರೈ, ಕೃಷಿಕ ಶೀನಪ್ಪ ರೈ, ಉದ್ಯಮಿ ಕರುಣಾಕರ್ ರೈ ಅಶ್ವಿನಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಸಂತೋಷ್ ರೈ ನಳೀಲು, ಎನ್ ಕೆ ಜಗನ್ನಿವಾಸ್ ರಾವ್, ಸಾಜ ರಾಧಾಕೃಷ್ಣ ಆಳ್ವ, ಡಾ. ರಘುಬೆಳ್ಳಿಪ್ಪಾಡಿ, ಗಣೇಶ್ ಸೆಟ್ಟಿ ಆದೂರು, ಸೇರಿದಂತೆ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಧರ್ಮದರ್ಶಿ ಬಾಬು ಪಾಲ್ತಾಡು ರವರು ತಿಳಿಸಿದ್ದಾರೆ.