ಉಪ್ಪಿನಂಗಡಿ: ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ.ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವ ಎಚ್. ಆಕಾಂಕ್ಷ ಶೆಟ್ಟಿಯವರನ್ನು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಾನುವಾರ ಹಿರೇಬಂಡಾಡಿಯ ಆಕಾಂಕ್ಷ ಅವರ ಮನೆಯಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಈ ಹಿಂದೆ ಮೈಸೂರು ವಿವಿಯಿಂದ ಹಿರೇಬಂಡಾಡಿಯ ಗ್ರಾಮದವರೋರ್ವರು ರ್ಯಾಂಕ್ ಪಡೆದುಕೊಂಡಿದ್ದರು. ಅದಾಗಿ ಸುಮಾರು 42 ವರ್ಷಗಳ ಬಳಿಕ ಮತ್ತೊಮ್ಮೆ ಆಕಾಂಕ್ಷ ಅವರು ರ್ಯಾಂಕ್ ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಗ್ರಾಮೀಣ ಭಾಗದ ಹೆಣ್ಮಕ್ಕಳೂ ಸರಕಾರಿ ಶಾಲೆಗೆ ಹೋಗಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಆಕಾಂಕ್ಷ ಅವರು ತೋರಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣರಾಜ ಕುಂಬ್ಳೆ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನಿರ್ದೇಶಕರಾದ ಜಗದೀಶ್ ರಾವ್ ಮಣಿಕ್ಕಳ, ಯತೀಶ್ ಶೆಟ್ಟಿ, ಯಶವಂತ ಗುಂಡ್ಯ, ದಯಾನಂದ ಸರೋಳಿ, ರಾಮ ನಾಯ್ಕ, ಕುಂಞ, ರಾಜೇಶ್ ಶಾಂತಿನಗರ, ಮಾಜಿ ನಿರ್ದೇಶಕ ಅಝೀಝ್ ಬಸ್ತಿಕ್ಕಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಹೆಗ್ಡೆ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ, ಆಕಾಂಕ್ಷ ಶೆಟ್ಟಿಯವರ ಹೆತ್ತವರಾದ ತನುಜ್ಕುಮಾರ್ ಶೆಟ್ಟಿ ಹಾಗೂ ಗೀತಾ ಶೆಟ್ಟಿ ದಂಪತಿ, ಸಹೋದರಿ ಅಪೂರ್ವ ಶೆಟ್ಟಿ, ಸಿಎ ಬ್ಯಾಂಕ್ನ ಸಿಬ್ಬಂದಿ ಪುಷ್ಪರಾಜ್ ಶೆಟ್ಟಿ, ಶಶಿಧರ ಹೆಗ್ಡೆ, ಪ್ರವೀಣ್ ಆಳ್ವ, ರವೀಶ ಎಚ್.ಟಿ., ಗಾಯತ್ರಿ ಯು., ಕೀರ್ತನ್, ದೇವರಾಜ್, ನವೀನ್, ವಸಂತ, ವಿಜಯ, ಸಂತೋಷ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.