ಪುತ್ತೂರು : ಬೆಳ್ಳಿಪ್ಪಾಡಿ ಕೋರ್ಯ ತರವಾಡು ಮನೆ ಧರ್ಮ ನೇಮೋತ್ಸವ ಮಾ.28, 29ರಂದು ತರವಾಡು ಮನೆಯಲ್ಲಿ ಜರುಗಲಿದೆ. ಧೂಮಾವತಿ, ಕಲ್ಲುರ್ಟಿ, ಕೊರತ್ತಿ, ಮೈಯ್ಯಂದಿ, ಕಲಾಲ್ದ, ಗುಳಿಗ, ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ ಹಾಗೂ ಕುಂಟಲ್ದಾಯ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಮಾ. 28ರಂದು ಬೆಳಿಗ್ಗೆ ಗಣಪತಿ ಹವನ, ಸ್ಥಳದ ದೈವಗಳಿಗೆ ಪರ್ವ, ಮುಡಿಪು ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕುಟುಂಬ ದೈವಗಳ ಭಂಡಾರ ತೆಗೆದು ನೇಮೋತ್ಸವ, ಕಲ್ಲುರ್ಟಿ ದೈವದ ಗಗ್ಗರ ಸೇವೆ ನಂತರ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 10 ರಿಂದ ಕೊರತ್ತಿ ಮತ್ತು ಮೈಯ್ಯಂದಿ, ಕಲಾಲ್ಟ ಗುಳಿಗ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕುಂಟಲ್ಲಾಯ, ಧರ್ಮದೈವ ಧೂಮಾವತಿ ದೈವಗಳ ನೇಮೋತ್ಸವ ಜರುಗಲಿದೆಯೆಂದು ಕುಟುಂಬದ ಹಿರಿಯರಾದ ಮುತ್ತಪ್ಪ ಪೂಜಾರಿ ಉದಯಗಿರಿ, ಅಣ್ಣು ಪೂಜಾರಿ ಶಿಬರ ಹಾಗೂ ತುಕ್ರಪ್ಪ ಪೂಜಾರಿ ಕೋರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.