ಪ್ಯಾನ್ ಕಾರ್ಡ್‌ಗೆ ಆಧಾರ್ ಜೋಡಣೆ ಅವಧಿ ಜೂ.30ರವರೆಗೆ ವಿಸ್ತರಣೆ

0

ಪುತ್ತೂರು: ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಜೋಡಿಸುವಿಕೆ ಅವಧಿಯನ್ನು 2023ರ ಜೂನ್ 30ರವರೆಗೆ ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಆದೇಶ ಮಾಡಿದೆ.
ಈ ಮೊದಲು, ಆಧಾರ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಜೋಡಿಸಲು ಮಾರ್ಚ್ 31 ಕಡೆಯ ದಿನವಾಗಿತ್ತು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಡುವು ವಿಸ್ತರಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಲಿಂಕ್ ಮಾಡಲು 2022ರ ಮಾರ್ಚ್ 31ರವರೆಗೆ ಉಚಿತವಾಗಿತ್ತು. 2022ರ ಏಪ್ರಿಲ್ 1ರಿಂದ ರೂ.500 ಪಾವತಿಸಿ ಆಧಾರ್ ಲಿಂಕ್ ಮಾಡಬೇಕಾಗಿತ್ತು. 2022ರ ಜೂನ್‌ನಿಂದ 2023ರ ಮಾರ್ಚ್ 31ರವರಗೆ ಲಿಂಕ್ ಮಾಡಬೇಕಾದರೆ ರೂ.1,೦೦೦ ಪಾವತಿಸಬೇಕು ಎಂದು ಹೇಳಲಾಗಿತ್ತು. ಒಂದು ವೇಳೆ ಈ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ನಂತರ ಬರುವ ಅರ್ಜಿಗಳಿಗೆ ರೂ.೧೦10 ಸಾವಿರ ದಂಡ ಹಾಕಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇದೀಗ ಗುಡುವು ಮತ್ತೆ ವಿಸ್ತರಣೆಯಾಗಿರುವುದರಿಂದ ರೂ.1000 ಶುಲ್ಕದೊಂದಿಗೆ ಇದೇ ಜೂನ್ 30ರವರಗೆ ಆಧಾರ್ ಸಂಖ್ಯೆಯನ್ನು ಪ್ಯಾನ್‌ಗೆ ಲಿಂಕ್ ಮಾಡಬಹುದು.

ಯಾಕಾಗಿ?
ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು. ಪ್ಯಾನ್-ಆಧಾರ್ ಜೋಡಣೆಗೆ ಆಗ ಸರ್ಕಾರವು ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜೋಡಣೆ ಕಾರ್ಯಗತವಾಗಲಿಲ್ಲ. ಹೀಗಾಗಿ ಪ್ಯಾನ್-ಆಧಾರ್ ಜೋಡಣೆಗೆ ನೀಡಿದ್ದ ಗಡುವನ್ನು ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು. ಕೊನೆಯ ಹಂತದ್ದು ಎಂದು ಹೇಳಿ 2022ರ ಮಾರ್ಚ್‌ನಲ್ಲಿ ವಿಸ್ತರಿಸಿದ ಗಡುವು 2023ರ ಮಾರ್ಚ್ 31ಕ್ಕೆ ಕೊನೆಯಾಗಲಿದೆ ಎನ್ನಲಾಗಿತ್ತು. ಆಧಾರ್ ಜೊತೆಗೆ ಜೋಡಣೆಯಾಗದ ಪ್ಯಾನ್‌ಗಳನ್ನು ಇದೇ ಮಾರ್ಚ್ 31ರ ನಂತರ ಬಳಸಲು ಸಾಧ್ಯವಿಲ್ಲ. ಆನಂತರ ವ್ಯಾವಹಾರಿಕ ಮತ್ತು ತೆರಿಗೆ ಲಾಭಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರು ಇತ್ತೀಚೆಗೆ ಹೇಳಿದ್ದರು.

LEAVE A REPLY

Please enter your comment!
Please enter your name here