ಪುತ್ತೂರು:ಸಣ್ಣ ಉಳಿತಾಯ ಯೋಜನೆಗಳಿಗೆ ಖಾತೆದಾರರು ಇನ್ಮುಂದೆ ಆಧಾರ್ ಹಾಗೂ ಪಾನ್ ಕಾರ್ಡ್ ಮಾಹಿತಿ ಕೊಡುವುದು ಕಡ್ಡಾಯ ಎಂದು ಕೇಂದ್ರ ಹಣಕಾಸು ಇಲಾಖೆ ಶುಕ್ರವಾರ ಆದೇಶ ಮಾಡಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನಾ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಂತಹ ಸಣ್ಣ ಉಳಿತಾಯ ಖಾತೆದಾರರು ಸೆಪ್ಟೆಂಬರ್ 30ರೊಳಗೆ ತಮ್ಮ ಆಧಾರ್ ಹಾಗೂ ಪಾನ್ ನಂಬರ್ ಅನ್ನು ಜೋಡಿಸುವುದು ಅಥವಾ ಅಪ್ಡೇಟ್ ಮಾಡುವುದು ಕಡ್ಡಾಯ ಎಂದು ಹೇಳಿದೆ. ಸಣ್ಣ ಉಳಿತಾಯದಾರರ ಕೆವೈಸಿ ಹಾಗೂ ಪಾರದರ್ಶಕ ವ್ಯವಹಾರಗಳಿಗೆ ಈ ಕ್ರಮ ಅನುಕೂಲ ಆಗಲಿದೆ ಎಂದು ಹೇಳಿದೆ.
ಪಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸುವ ಕೊನೆಯ ದಿನಾಂಕವನ್ನು 2023ರ ಜೂನ್ 30ರವರಗೆ ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಆದೇಶ ಮಾಡಿದ ನಂತರ ಮತ್ತೊಂದು ಮಹತ್ವದ ಈ ಆದೇಶ ಹೊರಬಿದ್ದಿದೆ.