ಪುತ್ತೂರು: ಎಣ್ಮೂರು ಶ್ರೀ ಆದಿ ಬೈದೆರುಗಳ ನೇಮೋತ್ಸವವು ಎ.5 ಬುಧವಾರ ಸುಗ್ಗಿ ತಿಂಗಳ ಪೂವೆಯಂದು ಜರಗಲಿರುವುದು.
ಎ.3ರಂದು ಬೆಳಿಗ್ಗೆ ಗಂಟೆ 8.೦೦ಕ್ಕೆ ಶ್ರೀ ಮಹಾಗಣಪತಿ ಹವನ, ಸಾಯಂಕಾಲ ಗಂಟೆ 7.೦೦ಕ್ಕೆ ಎಣ್ಮೂರು ಬೀಡಿನಿಂದ ಉಳ್ಳಾಕುಳ ಭಂಡಾರ ಹೊರಡುವುದು, ರಾತ್ರಿ ಗಂಟೆ 8.೦೦ಕ್ಕೆ ಶ್ರೀ ಉಳ್ಳಾಕುಳ ನೇಮ ಮತ್ತು ಕಾಜು ಕುಜುಂಬ ನೇಮ. ಎ.4ರಂದು ಇಷ್ಟ ದೇವತೆಯ ನೇಮೋತ್ಸವ, ಎ.5ರಂದು ಬೆಳಗ್ಗೆ ಗಂಟೆ 8.೦೦ಕ್ಕೆ ನಾಗ ತಂಬಿಲ, ಗಂಟೆ 8.೦೦ಕ್ಕೆ ಮುಹೂರ್ತ ತೋರಣ, ಮಧ್ಯಾಹ್ನ 12.30ಕ್ಕೆ ಪೂರ್ವ ಸಂಪ್ರದಾಯದಂತೆ ಕಟ್ಟ ಬೀಡಿನಿಂದ ಭಂಡಾರ ಹೊರಡುವುದು, ನೇತ್ರಾದಿ ಗರಡಿಯಲ್ಲಿ ದರ್ಶನ, ರಾತ್ರಿ ಗಂಟೆ 8.೦೦ಕ್ಕೆ ಬೈದೆರುಗಳು ಗರಡಿ ಇಳಿಯುವುದು, ರಾತ್ರಿ ಗಂಟೆ 2.೦೦ಕ್ಕೆ ಕಿನ್ನಿದಾರು ಗರಡಿ ಇಳಿದ ರಂಗ ಸ್ಥಳ ಪ್ರವೇಶ, ಪ್ರಾತಃ ಕಾಲ 3.30ಕ್ಕೆ ಎಣ್ಮೂರು ಕ್ಟ ಬೀಡಿಗೆ ಬೈದೆರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಗೆ ಅರ್ಪಿಸುವುದು, ಬೆಳಿಗ್ಗೆ ಗಂಟೆ 5.೦೦ಕ್ಕೆ ಕೋಟಿ ಚೆನ್ನಯರ ದರ್ಶನ, ರಂಗ ಸ್ಥಳದಲ್ಲಿ ಸೇಟು, ಬೈದುರುಗಳ ಸೇಟು.
ಬೆಳಿಗ್ಗೆ ಗಂಟೆ 7.೦೦ಕ್ಕೆ ಗಂಧ ಪ್ರಸಾದ ಮತ್ತು ತುಲಾಭಾರ ನಡೆಯಲಿದೆ.
ಪ್ರತೀದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನ ಸಂತರ್ಪಣೆ ನಡೆಯಲಿದ್ದು ಭಕ್ತಾದಿಗಳು ಆಗಮಿಸಿ ಶ್ರೀ ಬೈದೆರುಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಣ್ಮೂರು ಶ್ರೀ ಕೋಟಿ ಚೆನ್ನಯ ಆದಿ ಬೈದೆರುಗಳ ಗರಡಿ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ತಿಳಿಸಿದ್ದಾರೆ.