ಎ.೬ರಂದು ಸಂಜೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದ್ದು ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ವಾಸ್ತು ಹೋಮ ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, ಎ.೭ರಂದು ಬೆಳಗ್ಗೆ ಗಣಪತಿ ಹೋಮ ಧ್ವಜಾರೋಹಣ, ನಿತ್ಯ ಬಲಿ, ರಾತ್ರಿ ಭೂತ ಬಲಿ ಉತ್ಸವ ನಡೆಯಲಿದೆ.
ಎ.೮ ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ, ರಾತ್ರಿ ಭೂತ ಬಲಿ ಉತ್ಸವ, ಎ.೯ರಂದು ಬೆಳಗ್ಗೆ ದೀಪ ಬಲಿ, ದರ್ಶನ ಬಲಿ ರಾತ್ರಿ ಭೂತ ಬಲಿ, ಕೆರೆಕಟ್ಟೆ ಉತ್ಸವ, ಎ.೧೦ ರಂದು
ಬೆಳಗ್ಗೆ ದೀಪ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ದರ್ಶನ ಬಲಿ, ಬೆಡಿಕಟ್ಟೆ ಉತ್ಸವ, ಸಿಡಿಮದ್ದು ಪ್ರದರ್ಶನ, ಮೃಗ ಬೇಟೆ ಸವಾರಿ, ನಿತ್ಯಪೂಜೆ, ಶ್ರೀ ಭೂತ ಬಲಿ, ಶಯನ ನಡೆಯಲಿದೆ.
ಎ.೧೧ರಂದು ಬೆಳಗ್ಗೆ ಕವಾಟೋದ್ಘಾಟನೆ, ತೀರ್ಥಪ್ರಸಾದ ವಿತರಣೆ, ತುಲಾಭಾರ ಸೇವೆ, ರಾತ್ರಿ ಪಡುಪೇಟೆ ಸವಾರಿ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆದು, ಬಳಿಕ
ನೆತ್ತರ್ ಕಣ, ವ್ಯಾಘ್ರ ಚಾಮುಂಡಿ ಇತ್ಯಾದಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಜಾತ್ರೋತ್ಸವದಲ್ಲಿ ಪ್ರತಿ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.