ಪುತ್ತೂರು: ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಬರೋಡಾ ಬ್ಯಾಂಕ್‌ನ ಎಟಿಎಂ ಎದುರು ಕಸದ ರಾಶಿ ತುಂಬಿಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಕಸ ರಾಶಿ ಬಿದ್ದಿದ್ದು ಇದನ್ನು ತೆಗೆಯುವವರಾರು ಎಂಬ ಪ್ರಶ್ನೆ ಮೂಡಿದೆ.
ಬರೋಡಾ ಬ್ಯಾಂಕ್‌ನ ಎ.ಟಿ.ಎಂ ಸಂಪೂರ್ಣ ನವೀಕರಣಗೊಂಡಿದ್ದು ಹೊಸ ಮೆಷಿನ್, ಫರ್ನಿಚರ್‍ಸ್, ಎಸಿ, ಲೈಟ್ಸ್ ಅಳವಡಿಸಲಾಗಿದೆ. ನವೀಕರಣದ ಸಂದರ್ಭದಲ್ಲಿ ಉತ್ಪತ್ತಿಯಾದ ಕಸ, ತ್ಯಾಜ್ಯ ಇತ್ಯಾದಿಗಳನ್ನು ಎಟಿಎಂ ರೂಮ್‌ನ ಎದುರಲ್ಲೆ ರಾಶಿ ಹಾಕಲಾಗಿದೆ. ಎಟಿಎಂ ನವೀಕರಣದ ಕೆಲಸ ಮಾಡಿದವರು ಕಸವನ್ನು ವಿಲೇವಾರಿ ಮಾಡದೇ ಬಿಟ್ಟು ಹೋಗಿದ್ದು ಕಳೆದ ಒಂದು ತಿಂಗಳಿನಿಂದ ಕಸದ ರಾಶಿ ಹಾಗೇಯೇ ಇದ್ದು ಗ್ರಾಹಕರಿಗೆ ಕಿರಿಕಿರಿ ಉಂಟಾಗಿದೆ. ಈ ಬಗ್ಗೆ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಬರೋಡಾ ಬ್ಯಾಂಕ್‌ನ ಕುಂಬ್ರ ಶಾಖೆಗೆ ಹಾಗೂ ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿಯವರಿಗೆ ಎಟಿಎಂ ಎದುರು ಕಸದ ರಾಶಿ ಇರುವ ಬಗ್ಗೆ ತಿಳಿಸಿದ್ದಾರೆ.
ಎಟಿಎಂ ದುರಸ್ತಿ ಮಾಡಿದವರು ಅದರಿಂದ ಉಂಟಾದ ಕಸ, ತ್ಯಾಜ್ಯ ಇತ್ಯಾದಿಗಳನ್ನು ವಿಲೇವಾರಿ ಮಾಡದೇ ಬಿಟ್ಟು ಹೋಗಿರುವುದು ಎಷ್ಟು ಸರಿ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.