ಮಾಂತೂರು ಹಿ‌ದಾಯತುಲ್ ಇಸ್ಲಾಂ ಮದರಸಕ್ಕೆ ಸತತ ಹದಿನೇಳನೇ ಬಾರಿ 100% ಫಲಿತಾಂಶ

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2023ನೇ ಸಾಲಿನಲ್ಲಿ ನಡೆಸಿದ ಮದರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಮಾಂತೂರು ಹಿದಾಯತುಲ್ ಇಸ್ಲಾಂ ಮದರಸವು ಸತತ ಹದಿನೇಳನೆ ಬಾರಿ ಶೇಕಡಾ ನೂರು ಫಲಿತಾಂಶ ಪಡೆದುಕೊಂಡಿದೆ.

ಐದನೇಯ ತರಗತಿ ಪರೀಕ್ಷೆ ಬರೆದ ಹನ್ನೆರಡು ವಿದ್ಯಾರ್ಥಿಗಳಲ್ಲಿ ಏಳು ಮಂದಿ ಪ್ರಥಮ, ಇಬ್ಬರು ದ್ವಿತೀಯ ಮತ್ತು ಮೂವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಏಳನೇ ತರಗತಿಯಲ್ಲಿ ಒಟ್ಟು ಪರೀಕ್ಷೆ ಬರೆದ ಹದಿಮೂರು ವಿದ್ಯಾರ್ಥಿಗಳಲ್ಲಿ, ಒಂದು ಡಿಸ್ಟಿಂಕ್ಷನ್, ಒಂಭತ್ತು ಪ್ರಥಮ, ಒಂದು ದ್ವಿತೀಯ ಮತ್ತು ಇಬ್ಬರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ ಹದನೇಳನೇ ಬಾರಿ ಶೇಕಡಾ ನೂರು ಫಲಿತಾಂಶ ಪಡೆದುಕೊಂಡಿದೆ ಎಂದು ಮದರಸ ಅಧ್ಯಾಪಕರಾದ ಸಿದ್ದೀಕ್ ಮುಸ್ಲಿಯಾರ್, ಶರೀಫ್ ಮುಸ್ಲಿಯಾರ್, ರಶೀದ್ ಮುಸ್ಲಿಯಾರ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here