ಪುತ್ತೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದಲ್ಲಿ 4 ಸಿ ಆರ್ ಪಿ ಎಫ್ ಕಂಪೆನಿಗಳು ಆಗಮಿಸಿದ್ದು, ಈ ಪೈಕಿ ಪುತ್ತೂರು ಮತ್ತು ಸುಳ್ಯಕ್ಕೆ ತಲಾ ಒಂದು ಕಂಪೆನಿ ಆಗಮಿಸಿದ್ದು, ಎ.6 ರಂದು ಜಿಲ್ಲಾ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರ ನೇತೃತ್ವದಲ್ಲಿ ಪುತ್ತೂರು ಮತ್ತು ಸುಳ್ಯದ 2 ಸಿ ಆರ್ ಪಿ ಎಫ್ ಕಂಪನಿಗಳು ಹಾಗೂ ಒಂದು ಕೆ ಎಸ್ ಆರ್ ಪಿ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪುತ್ತೂರು ಪೇಟೆಯಲ್ಲಿ ಪಥ ಸಂಚಲನ ನಡೆಯಿತು.
ಪುತ್ತೂರು ಕೂರ್ನಡ್ಕ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಬಳಿಯಿಂದ ದರ್ಬೆ ಜಂಕ್ಷನ್ ಮೂಲಕ ಮುಖ್ಯರಸ್ತೆ ಬೊಳುವಾರು, ಹಾರಾಡಿ, ಸಾಲ್ಮರ , ಬಸ್ ನಿಲ್ದಾಣದಲ್ಲಿ ಸಮಾವೇಶ ಗೊಳ್ಳಲಿದೆ.