ರಾಜಕೀಯ ಬೆಳವಣಿಗೆಯನ್ನು ಸಹಿಸದವರು ಮಾಡುವ ಷಡ್ಯಂತರ – ಸಂಜೀವ ಮಠಂದೂರು ಸ್ಪಷ್ಟನೆ

0
  • ವೈರಲ್ ಆಗಿರುವ ಚಿತ್ರಣ ಆಧುನಿಕ ತಂತ್ರಜ್ಞಾನ ಬಳಸಿ ಮಾಡಿದ್ದಾಗಿದೆ
  • ಅಂತಹ ಯಾವುದೇ ಘಟನೆಗಳು ಆಗಿರುವುದಿಲ್ಲ
  • ಅದರಲ್ಲಿ ನನ್ನ ಯಾವುದೇ ಪಾತ್ರ ಇರುವುದಿಲ್ಲ

ಪುತ್ತೂರು: ಇತ್ತೀಚಿಗೆ ವೈರಲ್ ಆಗಿರುವಂತಹ ಚಿತ್ರಣವು ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಾಡಿರುವುದಾಗಿದೆ. ಅಂತಹ ಯಾವುದೇ ಘಟನೆಗಳು ಆಗಿರುವುದಿಲ್ಲ ಮತ್ತು ಅದರಲ್ಲಿ ನನ್ನ ಯಾವುದೇ ಪಾತ್ರ ಇರುವುದಿಲ್ಲ. ಸದ್ರಿ ಚಿತ್ರಣವು ರಾಜಕೀಯ ವಿರೋಧಿಗಳು ನನ್ನನ್ನು ರಾಜಕೀಯದಿಂದ ಮುಗಿಸಲು ಮಾಡಿದ ತಂತ್ರವಾಗಿದೆ ಎಂದು ಸಂಜೀವ ಮಠಂದೂರು ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರತಿಷ್ಠಿತ ಮನೆಯಲ್ಲಿ ಹುಟ್ಟಿ ಬೆಳೆದ ನಾನು ನನ್ನ ಜೀವನವನ್ನು ಧಾರ್ಮಿಕ, ಶೈಕ್ಷಣಿಕ, ಸಹಕಾರ ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ಮೀಸಲಾಗಿಟ್ಟಿದ್ದು ಕಳೆದ ಹಲವು ದಶಕಗಳಿಂದ ಈ ಕ್ಷೇತ್ರಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಕಳೆದ ಹಲವು ವರ್ಷಗಳಿಂದ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯಲ್ಲಿ ತೊಡಗಿಸಿಕೊಂಡು ದೇವಾಲಯದ ಜೀರ್ಣೊದ್ಧಾರ ಮಾಡಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾಡುವಲ್ಲಿ ಮಹತ್ವರವಾದ ಪಾತ್ರವನ್ನು ವಹಿಸಿರುತ್ತೇನೆ. ಅಲ್ಲದೇ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಸರಕಾರಿ ಶಾಲೆಗಳಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ಕಲ್ಪಿಸುವಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಮಾಣಿಕ ಸಾಮಾಜ ಸೇವೆಯನ್ನು ಕೂಡ ಮಾಡಿಕೊಂಡು ಬಂದಿರುತ್ತೇನೆ.

ಕಳೆದ ಕೆಲವು ದಶಕಗಳಿಂದ ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಗ್ರಾಮ ಪಂಚಾಯಿತಿನಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಕಳೆದ ಅವಧಿಯಲ್ಲಿ ಶಾಸಕನನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ. ಅದರಲ್ಲಿ ವಿಶೇಷವಾಗಿ ಕಳೆದ 5 ವರ್ಷದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸುಮಾರು ಕೋಟಿ ರೂಪಾಯಿಗಳಿಗೂ ಮಿಕ್ಕಿ ಅನುದಾನವನ್ನು ತರಿಸಿ ಆ ಮೂಲಕ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುತ್ತೇನೆ. ಸದ್ರಿ ಅನುದಾನವನ್ನು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿರುತ್ತೇನೆ. ಅಲ್ಲದೇ ಬಡವರ್ಗದ ಜನರಿಗೆ ಸರಕಾರದಿಂದ ಸಿಗುವಂತಹ ಎಲ್ಲಾ ಸಕಲ ಸೌಲಭ್ಯಗಳನ್ನು ಒದಗಿಸಿರುತ್ತೇನೆ. ಕಳೆದ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಯಾವುದೇ ಜಾತಿ, ಮತ, ಪಂಥ, ನೋಡದೇ ಮಾಡಿರುತ್ತೇನೆ. ಈ ಅವಧಿಯಲ್ಲಿ ಸಾಕಷ್ಟು ಏಳು ಬೀಳುಗಳು ಆಗಿದ್ದರೂ ಎಲ್ಲವನ್ನು ಎದುರಿಸಿ ಮುನ್ನಡೆದಿದ್ದೇನೆ.

ಹೀಗಿರುವಾಗ ನನ್ನ ಅಭಿವೃದ್ಧಿಯನ್ನು ಸಹಿಸದ ಕೆಲವೊಂದು ವ್ಯಕ್ತಿಗಳು ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುತ್ತಾರೆ. ಇದು ನನ್ನ ವಿರುದ್ಧ ಮಾಡಿದ ಷಡ್ಯಂತರವಲ್ಲದೇ ಬೇರೆನೂ ಅಲ್ಲ. ಹಾಗೇ ಮಾಡಿದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಸತ್ಯ ಸತ್ಯಾತೆಗಳು ಇರುವುದಿಲ್ಲ, ಇತ್ತೀಚಿಗೆ ವೈರಲ್ ಆಗಿರುವಂತಹ ಚಿತ್ರಣವು ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಾಡಿರುವುದಾಗಿದೆ. ಅಂತಹ ಯಾವುದೇ ಘಟನೆಗಳು ಆಗಿರುವುದಿಲ್ಲ ಮತ್ತು ಅದರಲ್ಲಿ ನನ್ನ ಯಾವುದೇ ಪಾತ್ರ ಇರುವುದಿಲ್ಲ. ಸದ್ರಿ ಚಿತ್ರಣವು ರಾಜಕೀಯ ವಿರೋಧಿಗಳು ನನ್ನನ್ನು ರಾಜಕೀಯದಿಂದ ಮುಗಿಸಲು ಮಾಡಿದ ತಂತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಪ್ರಯತ್ನ ಸರ್ವೆ ಸಾಮಾನ್ಯವಾಗಿದೆ. ಈ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲು ನಾನು ತಯಾರು ಮಾಡುತ್ತಾ ಇದ್ದೇನೆ. ಅಲ್ಲದೇ ಈ ರೀತಿ ಪ್ರಚಾರ ಮಾಡುವವರ ವಿರುದ್ಧ ನಾನು ನಂಬಿದಂತಹ ಆರಾಧ್ಯ ದೇವರಾದ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here