ಏ.10: ಕುಂಬ್ರ ಶ್ರೀ ರಾಮ ಭಜನಾ ಮಂದಿರದ 41 ನೇ ವಾರ್ಷಿಕ ಮಂಗಳೋತ್ಸವ

0

ಭಜನೆ ಉತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಾನಿಷಾದ ಯಕ್ಷಗಾನ ಬಯಲಾಟ

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯ ಹೃದಯಭಾಗದಲ್ಲಿರುವ ಕುಂಬ್ರ ಶ್ರೀ ರಾಮ ಭಜನಾ ಮಂದಿರದ 41 ನೇ ವಾರ್ಷಿಕ ಮಂಗಳೋತ್ಸವದ ಪ್ರಯುಕ್ತ ಭಜನೆ ಉತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವೆ ‘ಮಾನಿಷಾದ’ ಯಕ್ಷಗಾನ ಬಯಲಾಟ ಸೇವೆ ಏ.10 ರಂದು ಮಂದಿರದ ವಠಾರದಲ್ಲಿ ನಡೆಯಲಿದೆ.

ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಸ್ತಮಾನದ ತನಕ ವಿವಿಧ ತಂಡಗಳಿಂದ ಭಜನೆ ಉತ್ಸವ ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸೂರ್ಯಸ್ತಮಾನಕ್ಕೆ ಭಜನಾ ಮಹಾ ಮಂಗಳಾರತಿ, ಸಂಜೆ ಕಟೀಲು ಶ್ರೀ ದೇವಿಯ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.45 ಕ್ಕೆ ಕಟೀಲು ಶ್ರೀ ದೇವಿಯ ಪೂಜೆ ನಡೆಯಲಿದ್ದು ಬಳಿಕ ‘ಮಾನಿಷಾದ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸುವಂತೆ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿ, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಜತೆ ಕಾರ್ಯದರ್ಶಿ ಆಶಾ ಮಾಧವ ರೈ ಕುಂಬ್ರ, ಸಂಚಾಲಕರುಗಳಾದ ಅರುಣ ರೈ ಬಿಜಳ, ವಿನೋದ್ ಶೆಟ್ಟಿ ಮುಡಾಲ, ಹರಿಪ್ರಸಾದ ಆಳ್ವ ನಿರಾಳ ಮತ್ತು ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here