ಜನರ ಬೆಂಬಲದಿಂದ 10 ವರ್ಷದಲ್ಲಿ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ

0

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸುಶೀಕ್ಷಿತ ಅಭ್ಯರ್ಥಿ ಡಾ| ವಿಶು ಕುಮಾರ್ – ಅಶೋಕ್ ಎಡಮಲೆ

ಪುತ್ತೂರು: ಕೇವಲ 10 ವರ್ಷದಲ್ಲಿ ಸದಸ್ಯರಿಕ್ಕಿಂತ ಜನರ ಬೆಂಬಲದಿಂದ ರಾಷ್ಟ್ರೀಯ ಪಕ್ಷವಾಗಿ ಮೂಡಿ ಬಂದಿರು ಆಮ್ ಆದ್ಮಿ ಪಕ್ಷ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಗುಣಮಟ್ಟದ ರಾಜಕಾರಣ ಇರಬೇಕಾದರೆ ಕಾರ್ಯಕರ್ತರು ಬೇಕು. ಹಾಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ಸುಶೀಕ್ಷಿತರಾಗಿರುವ ಕೃಷಿ ವಿಜ್ಞಾನಿ ಡಾ| ವಿಶು ಕುಮಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ದೇಶದಲ್ಲಿ ಸುಮಾರು 137 ವರ್ಷ ಮತ್ತು ಸ್ವಾತಂತ್ರ್ಯ ನಂತರ 70 ವರ್ಷದ ಕಾಂಗ್ರೆಸ್ ಮತ್ತು 65 ವರ್ಷದ ವರ್ಷದ ಅನುಭವುಳ್ಳ ಬಿಜೆಪಿ ಪಕ್ಷವಿದ್ದರೂ ಜನರಿಗೆ ಸರಿಯಾದ ಆಯ್ಕೆಯ ಪಕ್ಷ ಇರಲಿಲ್ಲ. ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಪರ್ಯಾಯವಾಗಿ ಅಲ್ಲ ಹೊಸ ರಾಜಕಾರಣವಾಗಿ ಬಂದಿದೆ. ಇವತ್ತು ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್‌ನಲ್ಲಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಈ ರೀತಿಯಾಗಿ ಬಂದವರಿಲ್ಲ. ಬಹುತೇಕ ಅಭ್ಯರ್ಥಿಗಳು ಸುಶೀಕ್ಷಿತರಾಗಿದ್ದು ಹೊಸ ರೀತಿಯಲ್ಲಿ ಜನರ ನಡುವಿನ ನಾಯಕರಾಗಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಪಕ್ಷದಿಂದ ಪ್ರತ್ಕೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪುತ್ತೂರು ಅಭ್ಯರ್ಥಿ ಡಾ.ಬಿ.ಕೆ. ವಿಶುಕುಮಾರ್ ಗೌಡ, ನಾಯಕರಾದ ಜನಾರ್ದನ ಬಂಗೇರ, ಪುರುಷೋತ್ತಮ ಕೋಲ್ಪೆ, ಮಹಮ್ಮದ್ ಆಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here