ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ-ಸಿ-ವಿಜಿಲ್ ಆಪ್‌ನಲ್ಲಿ ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ಕ್ರಮ : ಬಸವರಾಜ್

0

ಮಂಗಳೂರು:ಮೇ 10ರಂದು ರಾಜ್ಯ ವಿಧಾನಸಭೆಯ 224 ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು ಚುನಾವಣೆ ನೀತಿ ಸಂಹಿತೆ ಉಲ್ಲಂಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಚುನಾವಣಾ ಆಯೋಗ ಅಭಿವೃದ್ಧಿ ಪಡಿಸಿದ ಸಿ-ವಿಜಿಲ್ ಆಪ್‌ನ ಮೂಲಕ ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ದೂರಿನ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಐಟಿ ನೋಡಲ್ ಅಧಿಕಾರಿ ಡಾ|ಬಸವರಾಜ್ ತಲ್ವಾರ್ ಹೇಳಿದ್ದಾರೆ.


ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಿ-ವಿಜಿಲ್ ಪ್ರಜೆಗಳ ಆಪ್‌ನ ಕುರಿತಾಗಿ ನಡೆದ ಪ್ರಾತ್ಯಕ್ಷಿಕೆಯ ಬಳಿಕ ಅವರು ಮಾತನಾಡಿದರು.ಎಂಸಿಸಿ ಜಾರಿಯಾದ ಬಳಿಕ ಹಣದ ಸಾಗಾಟ, ಫೇಕ್ ನ್ಯೂಸ್, ವಸ್ತು, ಹಣದ ವಿತರಣೆ, ಆಸ್ತಿಗೆ ಹಾನಿ, ಕೋಮುದ್ವೇಷ ಭಾಷಣ, ಬರಹಗಳ ಕುರಿತು, ಪೇಯ್ಡ್ ನ್ಯೂಸ್, ಉಚಿತವಾಗಿ ವಸ್ತುಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಮದ್ಯ ಹಂಚುವಿಕೆ ಇತ್ಯಾದಿ ವಿಚಾರಗಳ ಮೇಲೆ ಸಿ-ವಿಜಿಲ್ ಆಪ್‌ನಲ್ಲಿಯೇ ಫೊಟೋ, ವಿಡಿಯೋ ಹಾಗೂ ಆಡಿಯೋಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು ಎಂದವರು ಹೇಳಿದರು.


ದಕ್ಷಿಣ ಕನ್ನಡದಲ್ಲಿ ಇಲ್ಲಿಯವರೆಗೆ 54 ದೂರುಗಳಲ್ಲಿ 38 ದೂರುಗಳಿಗೆ ಕ್ರಮ ಜರುಗಿಸಲಾಗಿದೆ.ಇದರಲ್ಲಿ ಉಳಿದ ದೂರುಗಳು ಸರಿ ಇಲ್ಲ.ಅಪೂರ್ಣ ಮಾಹಿತಿಯ ಆಧಾರದಲ್ಲಿ ರಿಜೆಕ್ಟ್ ಮಾಡಲಾಗಿದೆ.ಸರಿಯಾದ ದೂರುಗಳಿಗೆ ಎಆರ್‌ಒ, ಆರ್‌ಒಗಳ ಮೂಲಕ ಕ್ರಮ ಜರುಗಿಸಲಾಗಿದೆ ಎಂದು ಬಸವರಾಜ್ ಮಾಹಿತಿ ನೀಡಿದರು.


458 ಸಿ-ವಿಜಿಲ್ ತನಿಖಾಧಿಕಾರಿಗಳು:
ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 335 ತಂಡಗಳನ್ನು ರಚನೆ ಮಾಡಿಕೊಂಡು ೪೫೮ ಸಿ-ವಿಜಿಲ್ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಸಿ-ವಿಜಿಲ್‌ನಲ್ಲಿ ದೂರು ದಾಖಲಿಸಿಕೊಂಡ ಕೂಡಲೇ ಜಿಲ್ಲಾ ನಿಯಂತ್ರಣ ಕೇಂದ್ರ(ಡಿಸಿಸಿ)ದ ಮೂಲಕ ಫೀಲ್ಡ್‌ನಲ್ಲಿರುವ ಅಧಿಕಾರಿಗಳಿಗೆ ದೂರುಗಳ ಮಾಹಿತಿ ರವಾನೆಯಾಗುತ್ತದೆ.ಈ ಬಳಿಕ ಅವರು ದೂರಿಗೆ ಸಂಬಂಧಿಸಿದಂತಹ ಮಾಹಿತಿ ಸಂಗ್ರಹ ಮಾಡಿಕೊಂಡು ಆರ್‌ಒಗಳಿಗೆ ಮಾಹಿತಿ ನೀಡುತ್ತಾರೆ ಎಂದು ಬಸವರಾಜ್ ತಿಳಿಸಿದರು. ಎನ್‌ಐಟಿಕೆಯ ಉದ್ಯೋಗಿಗಳಾದ ಡಾ.ಅರವಿಂದ್ ಕೋಳೂರು ಮತ್ತು ಡಾ.ರಾಘವೇಂದ್ರ ಬಿ.ಎಸ್ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 54 ದೂರು 38ಕ್ಕೆ ಅಗತ್ಯ ಕ್ರಮ
ದಕ್ಷಿಣ ಕನ್ನಡದಲ್ಲಿ ಇಲ್ಲಿಯವರೆಗೆ 54 ದೂರುಗಳಲ್ಲಿ 38 ದೂರುಗಳಿಗೆ ಕ್ರಮ ಜರುಗಿಸಲಾಗಿದೆ.ಇದರಲ್ಲಿ ಉಳಿದ ದೂರುಗಳು ಸರಿ ಇಲ್ಲ.ಅಪೂರ್ಣ ಮಾಹಿತಿಯ ಆಧಾರದಲ್ಲಿ ರಿಜೆಕ್ಟ್ ಮಾಡಲಾಗಿದೆ.ಸರಿಯಾದ ದೂರುಗಳಿಗೆ ಎಆರ್‌ಒ, ಆರ್‌ಒಗಳ ಮೂಲಕ ಕ್ರಮ ಜರುಗಿಸಲಾಗಿದೆ ಎಂದು ಡಾ|ಬಸವರಾಜ್ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here