ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆಬೋರ್‌ವೆಲ್ ನಿರ್ಮಿಸಿ ನೀರಿನ ಅಭಾವ ನೀಗಿಸಿದ ಭಕ್ತ

0

ಪುತ್ತೂರು: ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಭಕ್ತರೋರ್ವರು ತಮ್ಮದೇ ಖರ್ಚಿನಲ್ಲಿ ಬೋರ್‌ವೆಲ್ ಕೊರೆಸಿ ದೇವಸ್ಥಾನದ ನೀರಿನ ಅಭಾವವನ್ನು ನೀಗಿಸಿದ್ದಾರೆ.
ಶಾಂತಿಗೋಡು ಗ್ರಾಮದ ಬಾಕಿತ್ತಿಮಾರ್ ನಿವಾಸಿ, ಪುರುಷರಕಟ್ಟೆಯಲ್ಲಿ ವ್ಯಾಪಾರಸ್ಥರಾಗಿರುವ ದೇವರಾಜ್ ಗೌಡ ಬಾಕಿತ್ತಿಮಾರು ಎಂಬವರು ದೇವಾಲಯಕ್ಕೆ ಬೋರ್‌ವೆಲ್ ತೆಗೆಸಿದವರು. ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಾಲಯಕ್ಕೆ ದೈನಂದಿನ ಕಾರ್ಯಕ್ರಮಗಳಿಗ ನೀರಿನ ಸಮಸ್ಯೆ ತಲೆದೋರಿತ್ತು. ಇತ್ತೀಚೆಗೆ ನಡೆದ ದೇವಾಲಯದ ಜಾತ್ರೋತ್ಸವ ಸಂದರ್ಭದಲ್ಲಿ ದೇವಾಲಯದ ಸಮೀಪದ ಭಕ್ತಾದಿಗಳ ಬೋರ್‌ವೆಲ್‌ನಿಂದ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನೀರಿನ ಅಭಾವವನ್ನು ಅರಿತ ದೇವರಾಜ್ ಗೌಡರವರು ತಮ್ಮದೇ ಸ್ವಂತ ಖರ್ಚಿನಲ್ಲಿ ದೇವಾಲಯದ ವಠಾರದಲ್ಲಿ ಬೋರ್‌ವೆಲ್ ತೆಗೆಸಿ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಬೋರ್‌ವೆಲ್‌ಗಾಗಿ ಸುಮಾರು ಒಂದು ಲಕ್ಷದಷ್ಟು ಖರ್ಚು ಭರಿಸಿದ್ದಾರೆ. ಇದೀಗ ಬೋರ್‌ವೆಲ್‌ಗೆ ಪಂಪು ಕೂಡ ಅಳವಡಿಸಲಾಗಿದ್ದು ನೀರಿನ ಸಮಸ್ಯೆ ನೀಗಿಸಿದ್ದಾರೆ.

ದೇವಾಲಯದ ನೀರಿನ ಅಭಾವವನ್ನು ನೀಗಿಸಲು ಕೊಳವೆ ಬಾವಿಯನ್ನು ತೆಗೆದು ಶ್ರೀದೇವರಿಗೆ ಸಮರ್ಪಿಸಿದ ದೇವರಾಜ ಬಾಕಿಮಾರುರವರಿಗೆ ವಂದನೆಗಳು. ಅವರಿಗೆ ದೇವರು ಆಯುರಾರೋಗ್ಯ ನೀಡಿ ಕರುಣಿಸಲಿ. ಮುಂದೆಯೂ ಇಂಥ ಒಳ್ಳೆಯ ಕೆಲಸ ಮಾಡುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ.
ಸುಬ್ರಹ್ಮಣ್ಯ ತೊಳ್ಪಾಡಿತ್ತಾಯ, ಶಾಂತಿಗೋಡು
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

ದೇವಾಲಯದಲ್ಲಿನ ನೀರಿನ ಸಮಸ್ಯೆಯನ್ನು ತಿಳಿದು ಬೋರ್‌ವೆಲ್ ತೆಗೆಸಿದ್ದೇನೆ. ಬೋರ್‌ವೆಲ್‌ಗಾಗಿ ಸುಮಾರು ಒಂದು ಲಕ್ಷದ ಹತ್ತು ಸಾವಿರ ವೆಚ್ಚ ತಗಲಿದೆ. ಈ ಮೂಲಕ ದೇವರ ಸೇವೆ ಮಾಡುವ ಒಂದು ಅವಕಾಶ ಸಿಕ್ಕಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತಾದಿಗಳು ಸಹಕರಿಸಿದ್ದಾರೆ.
ದೇವರಾಜ್ ಗೌಡ ಬಾಕಿತ್ತಿಮಾರು,ಶಾಂತಿಗೋಡು

LEAVE A REPLY

Please enter your comment!
Please enter your name here