ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳ್ನಾಡುಗುತ್ತು ಇವರಿಂದ ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳ್ನಾಡುಗುತ್ತು ಇವರಿಂದ ಶ್ರೀ ದೇವರ ಜಾತ್ರೋತ್ಸವದ ಧ್ವಜಾರೋಹಣದ ಶುಭ ದಿನವಾದ ಏ.10 ರಂದು ಪೂರ್ವಶಿಷ್ಠ ಪದ್ಧತಿಯಂತೆ ಕುರಿಯ ಮಾಡಾವು ಏಳ್ನಾಡುಗುತ್ತು ಮನೆತನದ ಶ್ರೇಯಸ್ಸು ಹಾಗೂ ಗೌರವಾರ್ಥವಾಗಿ ಮಹಾಪೂಜೆ, ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಕುಟುಂಬದ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ನಡೆಯಿತು.


ಸಮಿತಿ ವತಿಯಿಂದ ದೇವಸ್ಥಾನಕ್ಕೆ ದೇಣಿಗೆ ನೀಡಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ರವರು ದೇಣಿಗೆ ಸ್ವೀಕರಿಸಿದರು.ಮಧ್ಯಾಹ್ನ  ಮಹಾಪೂಜೆ ನಡೆದು ಪಲ್ಲಪೂಜೆ ನಡೆಯಿತು. ದೇವಳದ ಅರ್ಚಕ ಜಯರಾಮ ಭಟ್ ರವರು ಪಲ್ಲಪೂಜೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ಏಳ್ನಾಡುಗುತ್ತು ಇದರ ಗೌರವಾಧ್ಯಕ್ಷ ಕೆ.ಎಂ.ವಿಶ್ವನಾಥ ರೈ ಮಾಡಾವು, ಸಂಚಾಲಕ ಕೆ.ಸೀತಾರಾಮ ರೈ ಕುರಿಯ, ಅಧ್ಯಕ್ಷ ಎಂ.ಬಿ.ಚೆನ್ನಪ್ಪ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಎಸ್.ಮಾಧವ ರೈ ಕುಂಬ್ರ, ಜತೆ ಕಾರ್ಯದರ್ಶಿ ಸತೀಶ್ ರೈ ಕುರಿಯ, ಕೋಶಾಧಿಕಾರಿ ಜಯಶೀಲ ರೈ ಕುರಿಯ ಹಾಗೂ ಸರ್ವ ಸದಸ್ಯರುಗಳು ಮತ್ತು ಕುರಿಯ ಮಾಡಾವು ಏಳ್ನಾಡುಗುತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರು, ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here