ಪುತ್ತೂರು ಜಾತ್ರೆ-2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಲುವಾಗಿ ದೇವಳದ ಎದುರು ಗದ್ದೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎ.11ರಂದು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಚಾಲನೆ ನೀಡಿದರು. ಡಾ. ಶಶಿಧರ್ ಕಜೆ, ಡಾ| ರಾಜೇಶ್ ಬೆಜ್ಜಂಗಳ, ವಿದ್ವಾನ್ ದೀಪಕ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಪ್ರೇಮಲತಾ ರಾವ್ , ಕುಮಾರಿ ದೀಕ್ಷಾ ಪಾರ್ವತಿ, ವಿದುಷಿ ಪ್ರೀತಿಕಲಾ, ಕೃಷ್ಣವೇಣಿ ಪ್ರಸಾದ್ ಮುಳಿಯ, ಶ್ರೀಮತಿ ರೋಪಲೇಖರವರ ಶಂಖನಾದ ಮೂಲಕ ಕಾರ್ಯಕ್ರಮ ಆರಂಭಗೊಂಡಿತ್ತು.


ನಿರ್ವಹಣೆಯನ್ನು ಡಾ. ವಿಜಯ ಸರಸ್ವತಿ , ವಿದೂಷಿ ಪ್ರೀತಿಕಲಾ ಹಾಗೂ ಲಕ್ಷ್ಮೀ ವಿ.ಜಿ ಭಟ್ ಅವರು ನಡೆಸಿದರು. ಬಳಿಕ ಮಂಗಳೂರಿನ ಕು. ಸಮನ್ವಿತ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ, ತ್ರಿಕರಣ ನೃತ್ಯ ಕಲಾ ತಂಡದಿಂದ ನೃತ್ಯ ವೈವಿಧ್ಯ, ನೃತ್ಯೋಪಾಸನಾ ಕಲಾ ಕೇಂದ್ರ ಪುತ್ತೂರು ಇವರಿಂದ ವಿದುಷಿ ಶಾಲಿನಿ ಆತ್ಮಭೂಷನ್ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯಲ್ಲಿ ಭರತನಾಟ್ಯ ‘ನೃತ್ಯೋಹಂ’, ನಾಟ್ಯರಂಜಿನಿ ಕಲಾಲಯ ಮೊಟ್ಟೆತ್ತಡ್ಕ ಇವರಿಂದ ಭರತನಾಟ್ಯ, ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯಿಂದ ಗಾಯನ – ಮರಳು ಚಿತ್ರ, ಮುರಳಿ ಬ್ರದರ್ಸ್ ಡಾನ್ಸ್ ಕ್ರೀವ್ ನೆಹರುನಗರ ಇವರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತ್ತು.

LEAVE A REPLY

Please enter your comment!
Please enter your name here