ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜಾತ್ರೆಯ ಸಲುವಾಗಿ ನಿತ್ಯ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಮೂರನೇ ದಿನವಾದ ಎ.12ರಂದು ಎಂದಿನಂತೆ ಶಂಖನಾದದೊಂದಿಗೆ ಆರಂಭಗೊಂಡಿತ್ತು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಕೃಷ್ಣವೇಣಿ ಪ್ರಸಾದ್ ಮುಳಿಯ, ಲಕ್ಷ್ಮಿ ವಿ ಜಿ ಭಟ್, ಮಾಲಾ ಕೇಶವ ಭಟ್ ಅವರು ಶಂಖನಾದ ಗೈದರು. ಬಳಿಕ ಶ್ರುತಿ ಕಾಂತಾಜೆ ಪುಟಾಣಿ ಸಿಯಾ ಇವರ ಭಕ್ತಿ ಗಾನಸುಧೆ, ಶಿವಗಾಮಿ ನಾಟ್ಯಾಲಯ ಬನ್ನೂರು ಇಲ್ಲಿನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ, ಉಕ್ಷಿಪ್ತ ನೃತ್ಯಕಲಾ ಶಾಲೆಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಂದ ಭಕ್ತಿ ಪ್ರಧಾನ ನೃತ್ಯ ಪ್ರದರ್ಶನ, ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ಸದಸ್ಯರಿಂದ ಸಮಗಾನಲೋಲ ಶಿವನ ಕುರಿತಾದ ನೃತ್ಯ, ಮಹಿಳಾ ಯಕ್ಷಗಾನ ತಂಡ ಬಾಲವನ ಪುತ್ತೂರು ಇದರ ಸದಸ್ಯರಿಂದ ’ಕದಂಬ ಕೌಶಿಕೆ’ ಎನ್ನುವ ಯಕ್ಷಗಾನ ಬಯಲಾಟ ನಡೆಯಿತು.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್, ಈಶ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಎಂ ಕಾರ್ಯಕ್ರಮ ನಿರ್ವಹಿಸಿದರು.