ಪುತ್ತೂರು: ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಕಾರ್ಯ ಕ್ರೀಡೆಗಳಲ್ಲಿ ನಡೆಯುತ್ತದೆ. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ರಾಮದಾಸ್ ಗೌಡ ಎಸ್ ಹೇಳಿದರು.
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಹಿರಿಯ ವಿದ್ಯಾರ್ಥಿಗಳ ಕ್ರೀಡಾ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಸಂಚಾಲಕ ಯು ಪಿ ರಾಮಕೃಷ್ಣ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳು. ತಮ್ಮ ಪ್ರಗತಿಯ ಜೊತೆಗೆ ಕಲಿತ ಸಂಸ್ಥೆಯ ಏಳಿಗೆಗಾಗಿ ವಿದ್ಯಾರ್ಥಿಗಳು ಸಹಕರಿಸಬೇಕು. ಸೇವಾ ಮನೋಭಾವ,ಹೃದಯ ಶ್ರೀಮಂತಿಕೆ ಮತ್ತು ಅಭಿಮಾನದಿಂದ ಪಾಲ್ಗೊಂಡರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಎಂದು ಹೇಳಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಕೃಷ್ಣ ಪಿ ಎನ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ:
ಐಟಿಐಯ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿರುವ ನಿವೃತ್ತ ಕಛೇರಿ ಅಧೀಕ್ಷಕ ಉಮೇಶ್ ಎಂ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ನಡೆಯಿತು. ಐಟಿಐ ನಿರ್ದೇಶಕರಾದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಮತ್ತು ಜಯರಾಮ ಚಿಲ್ತಡ್ಕ , ನಿವೃತ್ತ ಪ್ರಾಚಾರ್ಯ ಭವಾನಿ ಗೌಡ, ಪ್ರಾಚಾರ್ಯ ಪ್ರಕಾಶ್ ಪೈ ಬಿ . ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಪುಂಡಲೀಕ ಪ್ರಭು, ಕಾರ್ಯದರ್ಶಿ ಸುಚರಿತ್ ಜೈನ್, ಉಪಾಧ್ಯಕ್ಷ ಸತೀಶ್ ರೈ ಡಿ ಕೆ, ಸದಸ್ಯರಾದ ಸಂತೋಷ್ ಕುಮಾರ್, ವಸಂತ ಗೌಡ ದೇವಸ್ಯ, ಐಟಿಐಯ ತರಬೇತಿ ಅಧಿಕಾರಿ ವಸಂತಿ, ಕಿರಿಯ ತರಬೇತಿ ಅಧಿಕಾರಿಗಳಾದ ಸುಲೋಚನಾ, ಮಧುಕರ್, ದಯಾನಂದ, ಹರೀಶ್, ಜಯಶೀಲ, ಪ್ರದೀಪ್ ಕುಮಾರ್, ಸಿಬ್ಬಂದಿ ಜಯರಾಮ, ಪ್ರಕಾಶ್ ಉಪಸ್ಥಿತರಿದ್ದರು. ಐಟಿಐ ಹಿರಿಯ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಿರಿಯ ತರಬೇತಿ ಅಧಿಕಾರಿ ನಾರಾಯಣ ಪೂಜಾರಿ ಸ್ವಾಗತಿಸಿ, ಕೋಶಾಧಿಕಾರಿ ಜಗದೀಶ್ ಪಿ ವಂದಿಸಿದರು. ಸಂಘದ ಉಪಾಧ್ಯಕ್ಷ ಅಶ್ವತ್ಥ್ ಎಂ ಕಾರ್ಯಕ್ರಮ ನಿರೂಪಿಸಿದರು.