ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಲುವಾಗಿ “ಶಿವಾರ್ಪಣಂ” 4ನೇ ದಿನವಾದ ಎ.13ರ ಸಾಂಸ್ಕೃತಿಕ ವೈವಿಧ್ಯಮಯದಲ್ಲಿ ಎಂದಿನಂತೆ ಆರಂಭದಲ್ಲಿ ಓಂಕಾರ, ಶಂಖನಾದ, ಬಳಿಕ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕೃಷ್ಣವೇಣಿ ಮುಳಿಯ, ಡಾ. ವಿಜಯ ಸರಸ್ವತಿ, ಶ್ರೀಮತಿ ಮಾಲಿನಿ ಇವರ ಓಂಕಾರ, ಶಂಖನಾದ ದೊಂದಿಗೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಗೀತ ಕಲಾ ಶಾಲೆಯ ಸಂಗೀತ ಶಿಬಿರದ ಶಿಬಿರಾರ್ಥಿಗಳಿಂದ ಗಾನಸುಧೆ, ಈಶ ಕಲಾ ಲಹರಿ ತಂಡದಿಂದ ಕುಣಿತ ಭಜನೆ, ಭರತನಾಟ್ಯ, ಶಿವತಾಂಡವ ನೃತ್ಯ, ಮತ್ತು ಭಕ್ತಿ ಗೀತೆ, ಬೆಂಗಳೂರಿನ ವಿದ್ವಾನ್ ಯೋಗೇಶ್ ಕುಮಾರ್ ಮತ್ತು ವಿದುಷಿ ಸ್ನೇಹಾ ನಾರಾಯಣ ದಂಪತಿಯಿಂದ ಭರತನಾಟ್ಯ, ಪಾಂಚಜನ್ಯ ಯಕ್ಷ ಕಲಾವೃಂದ ಪುತ್ತೂರು ಇವರಿಂದ ‘ಮೋಕ್ಷ ಸಂಗ್ರಾಮ’ ಎಂಬ ಯಕ್ಷಗಾನ ಪ್ರದರ್ಶನಗೊಂಡಿತ್ತು. ಮೌನೇಶ್ ವಿಶ್ವಕರ್ಮ ಮತ್ತು ಹರಿಣಿ ಪುತ್ತೂರಾಯ ನಿರ್ವಹಿಸಿದರು.