ಸಂಘಟನಾತ್ಮಕವಾಗಿ ಬಿಜೆಪಿ ಚುನಾವಣೆ ಎದುರಿಸಲಿದೆ – ಶಾಸಕ ಸಂಜೀವ ಮಠಂದೂರು

0

ಪುತ್ತೂರು: ವ್ಯಕ್ತಿಕಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಅದನ್ನೇ ಸಂಜೀವ ಮಠಂದೂರು ಮಾಡುತ್ತಿದ್ದಾರೆ. ಪ್ರತಿಯೊಂದು ಬೂತ್ ಗಳಲ್ಲಿ ಕೂಡಾ ಸಕ್ರಿಯವಾಗಿ ಸಂಘಟನೆಯಿಂದ ಪುತ್ತೂರು ಬಲಿಷ್ಠವಾಗಿದೆ. ಇವತ್ತು ಹತ್ತಾರು ಯೋಜನೆ ಜನರ ಮುಂದಿದೆ. ಅದನ್ನು ಮುಂದುವರಿಸಲು ಬಿಜೆಪಿ ಅನಿವಾರ್ಯ ಎಂದು ಜನರು ಭಾವಿಸಿದ್ದಾರೆ. ಅದಕ್ಕಾಗಿ ಬಿಜೆಪಿ ಸಮರ್ಥ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಅವರನ್ನು ಘೋಷಣೆ ಮಾಡಿ ಅವರಿಗೆ ಕಾರ್ಯಕರ್ತರು ಮತದಾರರು ಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.


ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ 19 ಸಾವಿರ ಮತಗಳ ಅಂತರದಿಂದ ನಾನು ಗೆಲುವು ಸಾಧಿಸಿದ್ದೆ. ಇವತ್ತು ಆಶಾ ತಿಮ್ಮಪ್ಪ ಗೌಡ ಅವರನ್ನು20 ಸಾವಿರಕ್ಕೂ ಮಿಕ್ಕಿ ಮತ ಸಿಗುವಂತೆ ನಾನು ಪೂರ್ಣ ಕಾರ್ಯಪ್ರವೃತನಾಗಲಿದ್ದೇನೆ.ಒಟ್ಟು ಸಂಘಟನಾತ್ಮಕವಾಗಿ ಬಿಜೆಪಿ ಈ ಚುನಾವಣೆಯನ್ನು ಎದುರಿಸುತ್ತದೆ ಎಂದು ಹೇಳಿದರು.


ಬಿಜೆಪಿ ಪುತ್ತೂರು ವಿಧಾನಸಭಾ ಅಭ್ಯರ್ಥಿ ಆಶಾ ತಿಮ್ಮಪ್ಪ , ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಕಿಶೋರ್ ಬೊಟ್ಯಾಡಿ, ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್ ಸಿ ನಾರಾಯಣ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್, ಜಯಶ್ರೀ ಎಸ್ ಶೆಟ್ಟಿ, ನಿತೀಶ್ ಕುಮಾರ್ ಶಾಂತಿವನ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

35 ವರ್ಷದಿಂದ ನಾನು ಕಾರ್ಯಕರ್ತ
ನಾನು ಕಳೆದ 30 ವರ್ಷದಿಂದ ಕಾರ್ಯಕರ್ತ, ಬಳಿಕ 5 ವರ್ಷ ಶಾಸಕನಾಗಿ ಅವಕಾಶ. ಒಟ್ಟು 35 ವರ್ಷವೂ ನಾನು ಕಾರ್ಯಕರ್ತನಾಗಿದ್ದು, ಹಾಗಾಗಿ ಅವಕಾಶ ಕೊಡುವುದು ಪಕ್ಷಕ್ಕೆ ಬಿಟ್ಟದ್ದು. ಒಟ್ಟು ಹಿಂದುತ್ವದ ಆಧಾರದಲ್ಲಿ ಪಕ್ಷ ಕೆಲಸ ಮಾಡುತ್ತಿದೆ ಎಂದು ಸಂಜೀವ ಮಠಂದೂರು ಹೇಳಿದರು.

LEAVE A REPLY

Please enter your comment!
Please enter your name here