ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರಸ್ವತಿ ವಿದ್ಯಾ ಮಂದಿರ ಪುರುಷರಕಟ್ಟೆ, ನರಿಮೊಗರು ಇವರ ಜಂಟಿ ಆಶ್ರಯದಲ್ಲಿ ಎ.3 ರಿಂದ ಎ.13ರ ವರೆಗೆ ನಡೆದ ಬೇಸಿಗೆ ಕ್ರೀಡಾ ಶಿಬಿರವು ಮುಕ್ತಾಯಗೊಂಡಿತು. ಒಟ್ಟು 63 ವಿದ್ಯಾರ್ಥಿ ಭಾಗವಹಿಸಿದ್ದು ಖೋ ಖೋ, ಕಬಡ್ಡಿ, ವಾಲಿಬಾಲ್, ಕರಾಟೆ,ಚೆಸ್ ಕ್ರೀಡೆಗಳಿಗೆ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಪರೀಕ್ಷಿತ್ ತೋಳ್ಪಾಡಿ ಸಮಾರೋಪ ಭಾಷಣ ಮಾಡಿದರು. ಮುಖ್ಯ ಗುರುಗಳಾದ ರಾಜಾರಾಮ ವರ್ಮ ಹಾಗೂ ಶಿಕ್ಷಣ ಸಂಯೋಜಕರಾದ ರಾಜಾರಾಮ ನೆಲ್ಲಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಎಂ ವರದಿ ವಾಚಿಸಿದರು. 9ನೇ ತರಗತಿಯ ಜಾಸಿಫ್ ಸ್ವಾಗತಿಸಿ, 8ನೇ ತರಗತಿಯ ಯಶ್ವಿನ್ ವಂದಿಸಿದರು. 5ನೇ ತರಗತಿಯ ಮಾನ್ಯ, ಪೃಥ್ವಿ, ಆತ್ಮಿ, ಭೂಮಿಕಾ ಪ್ರಾರ್ಥನೆ ಗೈದರು. 6ನೇ ತರಗತಿಯ ಧನುಷಾ ಕಾರ್ಯಕ್ರಮ ನಿರ್ವಹಿಸಿದರು.