ವಿವೇಕಾನಂದ ಸೆಂಟ್ರಲ್ ಸ್ಕೂಲ್ (CBSE)ನಲ್ಲಿ ನೂತನವಾಗಿ STEAM LAB ಮತ್ತು ಆಧುನಿಕ HD TELESCOPE ಸ್ಥಾಪನೆ

0

ಪುತ್ತೂರು : ಪುತ್ತೂರಿನ ದಿವಂಗತ ನಾಮದೇವ ಪ್ರಭು ಮತ್ತು ಪುಷ್ಪಲತಾ ಪ್ರಭು ದಂಪತಿ ಸುಪುತ್ರಿ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿ, ಡಾ.ಅನ್ನಪೂರ್ಣ ಕಿಣಿಯವರ ಕೊಡುಗೆ STEAM Lab, ಹೆಚ್‌ ಡಿ ಟೆಲಿಸ್ಕೋಪ್‌ ನ್ನು ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸ್ಥಾಪನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಅಮೇರಿಕಾ ಹೃದಯ ತಜ್ಙೆ ಡಾ.ಅನ್ನಪೂರ್ಣ ಕಿಣಿ ಪ್ರಯೋಗಾತ್ಮಕ ಬೋಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆವಿಷ್ಕಾರ ಮನೋಭಾವವು ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದರು.

ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಆಧುನಿಕ ಶಿಕ್ಷಣವನ್ನು ನೀಡುವುದು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಧ್ಯೇಯವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಹೇಳಿದರು.

ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವ ವಿದ್ಯಾಸಂಸ್ಥೆಯಾಗಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್(CBSE)ನಲ್ಲಿ 3D ಸೈನ್ಸ್ ಪಾರ್ಕ್ ಹಾಗೂ ಸಂಯೋಜನಾತ್ಮಕ ಪ್ರಯೋಗಾಲಯವಿದ್ದು (Composite Lab) ಭೌಗೋಳಿಕ, ವೈಜ್ಞಾನಿಕ ಇತ್ಯಾದಿ ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅರಿಯಲು ಅನುಕೂಲಗಳನ್ನು ಕಲ್ಪಿಸಿದೆ. ಜೊತೆಗೆ, STEMನಲ್ಲಿರುವಂತೆ, ಪಠ್ಯದಲ್ಲಿರುವ ವಿಷಯಗಳಿಗೆ ಮಾತ್ರ ಒತ್ತು ಕೊಡದೆ, ಹೊಸತಾಗಿ ಅಭಿವೃದ್ಧಿ ಪಡಿಸಿದ STEAM (Science, Technology, Engineering, Arts and Mathematics) ತಾಂತ್ರಿಕತೆ ಯನ್ನು ಅಳವಡಿಸಿಕೊಂಡು ಮಕ್ಕಳಿಗೆ ಅಗತ್ಯವಿರುವ ಇತರ ಅನೇಕ ಕಲೆಗಳಿಗೂ ಪ್ರಾಮುಖ್ಯತೆಯನ್ನೀಯುತ್ತಿರುವ ಪುತ್ತೂರಿನ ಏಕೈಕ ವಿದ್ಯಾಸಂಸ್ಥೆ ಇದಾಗಿದೆ.
ಇವುಗಳು ಮಾತ್ರವಲ್ಲದೆ, 500ಕ್ಕೂ ಹೆಚ್ಚು ಆಧುನಿಕ ಉಪಕರಣಗಳನ್ನು ಹೊಂದಿರುವ ಇಲ್ಲಿಯ ಪ್ರಯೋಗಶಾಲೆಯು ಮಕ್ಕಳ ಸರ್ವತೋಮುಖ ಜ್ಞಾನಾಭಿವೃದ್ಧಿಗೆ ಪೂರಕವಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಾವು ಕಲಿತ ಹೆಚ್ಚಿನ ಎಲ್ಲಾ ವಿಷಯಗಳ ಬಗ್ಗೆಯೂ ಸ್ಪರ್ಶಿಸಿ, ವೀಕ್ಷಿಸಿ, ಅನುಭವಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದೆ. ಕಲಿಯುವ ಮಕ್ಕಳ ಬೌದ್ಧಿಕ ವಿಕಸನವನ್ನು ಗಟ್ಟಿಗೊಳಿಸಲು ಹಾಗೂ ಅದರ ಅಡಿಪಾಯವನ್ನು ಭದ್ರ ಪಡಿಸಲು ಮತ್ತು ವಿಷಯಗಳ ಬಗ್ಗೆ ಆಳವಾದ ಜ್ಞಾನ ಪಡೆಯಲು ಇವುಗಳೆಲ್ಲದರ ಜೊತೆಗೆ, ನಮ್ಮ ಜಿಲ್ಲೆಯಲ್ಲಿ ಸಂವಾದಾತ್ಮಕ ಫಲಕಗಳನ್ನು(4K Ultra HD Digital Interative Panel with Touch Screen) ಹೊಂದಿರುವ ಕೆಲವೇ ಕೆಲವು ವಿದ್ಯಾಸಂಸ್ಥೆಗಳಲ್ಲಿ ಇದೂ ಒಂದಾಗಿದೆ. ಮಕ್ಕಳು ಈ ವಿಶೇಷವಾದ ಫಲಕದಲ್ಲಿ ನೋಡಿ ಹಾಗೂ ಕೇಳಿ ಕಲಿತ ವಿಷಯಗಳನ್ನು ಬಹಳ ಬೇಗನೆ ಅರ್ಥೈಸುವುದರೊಂದಿಗೆ ಅದು ಅವರ ಮನಸ್ಸಿನಲ್ಲಿ ಸದಾ ಅಚ್ಚೊತ್ತಿ ನಿಲ್ಲುತ್ತದೆ. ಪ್ರಯೋಗಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಕುತೂಹಲವನ್ನು ಬೆಳೆಸುತ್ತವೆ. ಮಕ್ಕಳಲ್ಲಿ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಶಕ್ತಿಯುತವಾದ ಅತ್ಯಾಧುನಿಕ ಹೊಸ ದೂರದರ್ಶಕ (HD Telescope) ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದಾಗಿ
ವಿದ್ಯಾರ್ಥಿಗಳಿಗೆ ಅನೇಕ ಆಕಾಶಕಾಯಗಳನ್ನು ಹಾಗೂ ಚಂದ್ರ, ಶುಕ್ರ, ಗುರು, ಶನಿ, ಗ್ರಹಗಳು, ಉಪಗ್ರಹಗಳು, ನಕ್ಷತ್ರ, ಗೆಲ್ಯಾಕ್ಸಿ (Moon, Jupiter, Saturn, Stars, Galaxies and for deep sky observations) ಇತ್ಯಾದಿಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆ.

LEAVE A REPLY

Please enter your comment!
Please enter your name here