ತುಳುನಾಡಿನ ನಂಬಿಕೆಯಲ್ಲೊಂದಾಗಿದೆ ಬಿಸು ಪರ್ಬ-ವೆಂಕಟರಮಣ ಕಳುವಾಜೆ
ಪುತ್ತೂರು: ಸರ್ವ ಜಾತಿ ಧರ್ಮದವರನ್ನು ಗೌರವಿಸುತ್ತಾ, ಧಾರ್ಮಿಕ ನಂಬಿಕೆಯ ಆಚರಣೆಯನ್ನು ಆಚರಿಸುತ್ತಾ ನಡೆಯುವವನೇ ನಿಜವಾದ ಧಾರ್ಮಿಕ ಆಚರಣೆಯನ್ನು ನಂಬಿ ನಡೆಯುವ ವ್ಯಕ್ತಿ ಆಗಿದ್ದಾನೆ. ಆದ್ದರಿಂದ ಬಿಸು ಪರ್ಬ ತುಳುನಾಡಿನ ನಂಬಿಕೆಯಲ್ಲೊಂದಾಗಿದೆ ಎಂದು ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆರವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಬಪ್ಪಳಿಗೆ-ಬೈಪಾಸ್ ಆಶ್ಮಿ ಕಂಫರ್ಟ್ ನಲ್ಲಿ ಹಮ್ಮಿಕೊಳ್ಳಲಾದ ಬಿಸು ಪರ್ಬದ ಆಚರಣೆಯಲ್ಲಿ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ತುಳುವರ ನಂಬಿಕೆಯನುಸಾರ ಬಿಸು ಕಣಿಗೆ ನಮಸ್ಕರಿಸುತ್ತಾ ಆಚರಿಸುವ ಮೂಲಕ ಮಾತನಾಡಿದರು. ಯುಗಾದಿ ತಿಂಗಳಲ್ಲಿ ಬರುವ ಬಿಸು ತಾಳೆ ನೋಡುವುದು, ಕಣಿ ತೆಗೆಯುವುದು ಮುಂತಾದ ಕರ್ಮಶಾಸ್ತ್ರದ ಅನುಸಾರವನ್ನ ಅನುಸರಿಸಿ ನಮ್ಮೂರಿನ ಆಹಾರ ಪದ್ದತಿಯನ್ನ, ನಮ್ಮೂರಿನ ಬೆಳೆ ಯನ್ನು ಗೌರವಿಸಿ ನಡೆಯುವ ಹಬ್ಬವಾಗಿದೆ ಬಿಸು ಪರ್ಬ ಎಂದರು.
ರೋಟರಿ ಸೆಂಟ್ರಲ್ ಅದ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಚಂದ್ರಹಾಸ ರೈ ಬಿ.,ರೋಟರಿ ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷ ನವೀನ್ ಚಂದ್ರ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ್ ಶೆಟ್ಥಿ ದಂಪತಿ, ನವ್ಯಶ್ರಿ ನಾಯ್ಕ್, ಅಶೋಕ್ ನಾಯ್ಕ್ “ಬಿಸು” ಕಾರ್ಯಕ್ರಮದಂಗವಾಗಿ ಬಹುಮಾನ ಪಡೆದರು,
ಕಾರ್ಯಕ್ರಮದ ಬಳಿಕ ಬಿಸು ಪರ್ಬದ ಸಲುವಾಗಿ ಸಿಹಿಯೂಟ ಸಹ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.
ರೋಟರಿ ಕ್ಲಬ್ ಸೆಂಟ್ರಲ್ ಸದಸ್ಯರು ಮತ್ತು ಸದಸ್ಯರ ಕುಟುಂಬಸ್ಥರು ಉಪಸ್ಥಿತರಿದ್ದರು.ರೋಟರಿ ಸೆಂಟ್ರಲ್ ಕಾರ್ಯದರ್ಶಿ ಚಂದ್ರಹಾಸ ರೈ ವಂದಿಸಿದರು.