ಬೆಟ್ಟಂಪಾಡಿ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯಗಳ ಬಗ್ಗೆ ಮಾಹಿತಿ ಕಾರ್ಯಗಾರ

0

ಸರಿಯಾದ ಪೂರ್ವ ತಯಾರಿ ಉಜ್ವಲ ಭವಿಷ್ಯಕ್ಕೆ ದಾರಿ -ವರುಣ್ ಕೆ.

ಬೆಟ್ಟಂಪಾಡಿ: ಸರಿಯಾದ ಪೂರ್ವ ತಯಾರಿ ಉಜ್ವಲ ಭವಿಷ್ಯಕ್ಕೆ ದಾರಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ತಲುಪಲು ಇಂದಿನಿಂದಲೇ ತಯಾರಿ ನಡೆಸಬೇಕು. ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿದರೆ ಯಶಸ್ಸು ಖಂಡಿತ ಎಂದು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ ಕಾಲೇಜು ಮೂಡುಬಿದಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕ ವರುಣ್ ಕೆ. ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ಅಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ವಿಭಾಗ ಆಯೋಜಿಸಿದ ವೃತ್ತಿಜೀವನ ರೂಪಿಸಲಿರುವ ಉದ್ಯೋಗ ಕೌಶಲ್ಯಗಳ ಬಗೆಗಿನ ವಿಶೇಷ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ್ ಎಸ್. ರವರು ‘ಹಿಂದಿನ ದಶಕಗಳಲ್ಲಿ ಇಂತಹ ಕಾರ್ಯಗಾರಗಳ ಆಯೋಜನೆ ಕನಿಷ್ಠ ಪ್ರಮಾಣದಲ್ಲಿ ಜರುಗುತ್ತಿದ್ದವು, ಆದರೆ ಪ್ರಸ್ತುತ ದಿನಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಯುವಜನತೆ ಪ್ರಾಶಸ್ತ್ಯವನ್ನು ನೀಡುತ್ತಿರುವುದು ಸಂತಸದ ಸಂಗತಿ. ಉದ್ಯೋಗಿಕ ಜಗತ್ತಿನ ಸರಿಯಾದ ಮಾಹಿತಿಯ ಕೊರತೆ ಇದ್ದಲ್ಲಿ ಸರಿಯಾದ ಉದ್ಯೋಗ ದೊರೆಯಲು ಅಸಾಧ್ಯ. ಆದ್ದರಿಂದ ಇಂತಹ ಅವಕಾಶಗಳ ಸದ್ಬಳಕೆ ನಿಮ್ಮ ಔದ್ಯೋಗಿಕ ಜೀವನದ ಯಶಸ್ಸಿಗೆ ಕಾರಣವಾಗಬಹುದು ಎಂದು ಹೇಳಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು, ‘ಪ್ರಸ್ತುತ ಔದ್ಯೋಗಿಕ ಜಗತ್ತು ತಮ್ಮ ಉದ್ಯೋಗಿಗಳಲ್ಲಿ ಹಲವಾರು ವಿಷಯಗಳ ಬಗ್ಗೆ ಅದೇ ರೀತಿ ಕೌಶಲ್ಯಗಳ ಬಗ್ಗೆ ಪಾಂಡಿತ್ಯವನ್ನು ಬಯಸುತ್ತದೆ, ಇಂತಹ ಸಂದರ್ಭದಲ್ಲಿ ಕೇವಲ ಅಂಕ ಪಟ್ಟಿಯಲ್ಲಿ ಇದ್ದ ಅಂಕಗಳು ಅವರನ್ನು ಆಕರ್ಷಿಸಲು ವಿಫಲವಾಗುತ್ತದೆ. ಆದ್ದರಿಂದ ಯುವಜನತೆ ತಮ್ಮ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು’ ಎಂದರು.
ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಶ್ರೀಮತಿ ಸಂಧ್ಯಾ ಲಕ್ಷ್ಮಿ, ಶ್ರೀಮತಿ ಹರ್ಷಿತಾ ಮತ್ತು ಶ್ರೀಮತಿ ಶಶಿಕಲಾ ಪಾಲ್ಗೊಂಡಿದ್ದರು. ವಾಣಿಜ್ಯ ಸಂಘದ ನೂರಕ್ಕೂ ಅಧಿಕ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧನ್ಯಶ್ರೀ ಎನ್ ಸ್ವಾಗತಿಸಿ, ತೇಜಸ್ವಿನಿ ಪಿ. ಎಂ.‌ವಂದಿಸಿದರು. ಶ್ರುತಿಕಾ ಪಿ.‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here