





ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಿರಮಂಗಲ ಅವಭೃತ ಸ್ನಾನದ ನವೀಕೃತ ಕಟ್ಟೆಯನ್ನು ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮತ್ತು ಬ್ರಹ್ಮಶ್ರೀ ವೇ ಮೂ ಶ್ರೀಧರ್ ತಂತ್ರಿಯವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವರಿಗೆ ಸಮರ್ಪಿಸಲಾಯಿತು.


ಬೆಳಿಗ್ಗೆ ಗಣಪತಿ ಹವನ, ಕಲಶ ಪೂಜೆ, ಅನ್ನಸಂತಪರ್ಣೆ ನಡೆಯಿತು. ಶಾಸಕ ಸಂಜೀವ ಮಠಂದೂರು, ಡಾ.ಎಂ.ಕೆ ಪ್ರಸಾದ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸ್ವಾಮಿ ಕಲಾ ಮಂದಿರದ ಮಾಲಕ ಏ.ಮಾಧವ ಕೋಟೆ, ಶ್ರೀಧರ ಪಟ್ಲ, ರತ್ನಕಾರ್ ನಾಯ್ಕ್, ಡಿಕೆ ಜೈನ್, ಇನ್‌ಸ್ಪೆಕ್ಟರ್ ಪ್ರಮೋದ್ ಉಡುಪಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಜಗದೀಶ್ ಶೆಣೈ, ವಿಶ್ವನಾಥ ಕುಲಾಲ್, ಪ್ರಶಾಂತ್, ಮಾಧವ ವೀರಮಂಗಲ, ಧರ್ಣಪ್ಪ ವಿರಮಂಗಲ, ಮಹಾಬಲ ಶೆಟ್ಟಿ ವೀರಮಂಗಲ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಉದ್ಯಮಿ ನವೀನ್ ರೈ, ನಗರ ಸಭೆ ಸದಸ್ಯ ಬಾಲಚಂದ್ರ, ವಿಷ್ಣು ಸೇವಾ ಸಮಿತಿ ವಿರಮಂಗಲ ಇದರ ಪಧಾದಿಕಾರಿಗಳು, ಸದಸ್ಯರು, ಕಟ್ಟೆ ಸಮಿತಿ ಪದಾಧಿಕಾರಿಗಳು ಸದಸ್ಯರು, ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರು ಮತ್ತು ಊರಿನ ಪರ ಊರಿನ ಭಕ್ತರು ಉಪಸ್ಥಿತರಿದ್ದರು.













