ಪುಣಚ : ಕೇಪು ಗ್ರಾಮದ ಕಲ್ಲಂಗಳಗುತ್ತು ತರವಾಡು ಮನೆಯಲ್ಲಿ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಎ.22ರಿಂದ ಎ.23ರ ತನಕ ನಡೆಯಲಿದೆ. ಎ.22ರಂದು ಬೆಳಿಗ್ಗೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತ್ರತ್ವದಲ್ಲಿ ಗಣಪತಿಹೋಮ, ನಾಗ ತಂಬಿಲ, ಆಶ್ಲೇಷ ಪೂಜೆ, ಸತ್ಯನಾರಾಯಣ ಪೂಜೆ,
ಶ್ರೀವೆಂಕಟ್ರಮಣ ದೇವರ ದರ್ಶನ ಹರಿಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು, ಪಡಿಅಕ್ಕಿ, ಎಣ್ಣೆ ಕೊಡುವುದು, ನಂತರ ತರವಾಡು ಮನೆಯ ಎದುರು ಕೊರತಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬಳಿಕ ರಾತ್ರಿ ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮ ನಡೆಯಲಿದೆ.
ಎ.23ರಂದು ಬೆಳಿಗ್ಗೆ ಧರ್ಮದೈವ ಶ್ರೀಧೂಮಾವತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಕಲ್ಲಂಗಳ ಗುತ್ತು ತರವಾಡು ಮನೆ ಪ್ರಕಟಣೆ ತಿಳಿಸಿದೆ