ಪುತ್ತೂರು:ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಬಿಜೆಪಿ ತನ್ನ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಒಟ್ಟು 40 ಪ್ರಮುಖರನ್ನು ಬಿಜೆಪಿ ರಾಜ್ಯದಾದ್ಯಂತ ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ, ಪುತ್ತೂರುನ ಮಾಜಿ ಶಾಸಕ ಡಿ.ವಿ.ಸದಾನಂದ ಗೌಡ, ದ.ಕ.ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಹೆಸರೂ ಲಿಸ್ಟ್‌ನಲ್ಲಿದೆ.
ಬಿಜೆಪಿ ಟೆಕೆಟ್ ವಂಚಿತ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರ ಹೆಸರೂ ಲಿಸ್ಟ್‌ನಲ್ಲಿದೆ. ಮನಸುಖ್ ಮಾಂಡವೀಯ, ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ,ಗೋವಿಂದ್ ಕಾರಜೋಳ,ಆರ್.ಅಶೋಕ್, ನಿರ್ಮಲಾ ಸೀತಾರಾಮನ್,ಸ್ಮೃತಿ ಇರಾನಿ,ಧರ್ಮೇಂದ್ರ ಪ್ರಧಾನ್, ಕೆ.ಅಣ್ಣಾಮಲೈ, ಅರುಣ್ ಸಿಂಗ್,ಡಿ.ಕೆ.ಅರುಣಾ,ಸಿ.ಟಿ.ರವಿ, ಶಿವರಾಜ್ ಸಿಂಗ್ ಚೌಹಾಣ್, ಹೀಮಂತ್ ಬಿಸ್ವ ಶರ್ಮಾ, ಪ್ರಭಾಕರ್ ಕೋರೆ, ಎ.ನಾರಾಯಣಸ್ವಾಮಿ, ಭಗವಂತ್ ಖೂಬಾ, ಬಿ.ಶ್ರೀರಾಮುಲು, ಬಸನಗೌಡ ಪಾಟೀಲ್ ಯತ್ನಾಳ್,ಉಮೇಶ್ ಜಾದವ್, ಚಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಜಿ.ವಿ.ರಾಜೇಶ್, ಜಗ್ಗೇಶ್, ಶೃತಿ,ತಾರಾ ಅನುರಾಧ ತಾರಾ ಪ್ರಚಾರಕರ ಪಟ್ಟಿಯಲ್ಲಿರುವ ಪ್ರಮುಖರು.