ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಪ್ರಿಲ್ 22 ರಂದು ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲಿ ಎನರ್ಜಿ ಸ್ವರಾಜ್ ಫೌಂಡೇಶನ್ ಅಟಲ್ ಇನ್ನೋವೇಶನ್ ಮಿಷನ್ (NITI AAyog) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಹಯೋಗದೊಂದಿಗೆ ಮದರ್ ಅರ್ಥ್ ಡೇ ಸಂಧರ್ಭದಲ್ಲಿ ವಿಶ್ವದ ಅತಿ ದೊಡ್ಡ ಜಾಗತಿಕ ಹವಾಮಾನ ಗಡಿಯಾರ ಜೋಡಣೆ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹವಾಮಾನ ಬದಲಾವಣೆ ಮತ್ತು ಏರುತ್ತಿರುವ ತಾಪಮಾನದ ಬಗ್ಗೆ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಲು ಈ ವರ್ಷ ಏಪ್ರಿಲ್ 22 ಭೂ ದಿನದ ವಿಶೇಷ ಸಂದರ್ಭ ವಿಶ್ವ ದಾಖಲೆಯ ಬಹುದೊಡ್ಡ ಕಾರ್ಯಕ್ರಮದಲ್ಲಿ ಸರಕಾರ, ಸಾರ್ವಜನಿಕ, ಕಾರ್ಪೋರೇಟ್‌ಗಳು, ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, NGO ಗಳು ಹೀಗೆ ಸುಮಾರು 10000 ಸಂಸ್ಥೆಗಳು ಸೇರಿ ತಮ್ಮದೇ ಆದ ಹವಾಮಾನ ಗಡಿಯಾರಗಳನ್ನು ಜೋಡಿಸಲು ಮತ್ತು ಕಟ್ಟಡಗಳ ಮೇಲೆ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಲಕ್ಷಾಂತರ ಜನರು ಪ್ರತಿದಿನ ಟೆಕ್ಕಿಂಗ್ ಸಮಯವನ್ನು ನೋಡಬಹುದು ಮತ್ತು ಹವಾಮಾನ ಸುಧಾರಣೆಗೆ ಕ್ರಮಕೈಗೊಳ್ಳಲು ಪ್ರೋತ್ಸಾಹಿಸಬಹುದು.
ಈ ಕಾರ್ಯಕ್ರಮದಲ್ಲಿ 10ನೇ ತರಗತಿಯ ಕಾರ್ತಿಕೇಯ ವಾಗ್ಲೆ (ಮಂಜಲಡ್ಪು ಶ್ರೀ ಪ್ರಕಾಶ್ ವಾಗ್ಳೆ ಬಿ ಮತ್ತು ಸುಲೋಚನ ಎಸ್ ರವರ ಪುತ್ರ), ಶ್ರೀವತ್ಸ ಬಿ (ಬನ್ನೂರು ಮಂಜುನಾಥಯ್ಯ ಬಿ ಮತ್ತು ಮೀನಾಕ್ಷಿ ಬಿ ರವರ ಪುತ್ರ), ಕಷೀಶ್ ಪಿ ಎಸ್ (ಚಿಕ್ಕಪುತ್ತೂರು ಸತೀಶ್ ಪಿ ಮತ್ತು ರಂಜಿನಿ ಎ ರವರ ಪುತ್ರಿ), ಪ್ರಕೃತಿ ವಿ ರೈ (ಪಾಂಗ್ಲಾಯಿ ವಿಠಲ ರೈ ಎ ಮತ್ತು ಚಿತ್ರಾ ರೈ ಎಸ್ ರವರ ಪುತ್ರಿ), 9ನೇ ತರಗತಿಯ ಅಕ್ಷಯ್ ಗಣೇಶ್ ಕೆ (ವರ್ಕಾಡಿ ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್ ರವರ ಪುತ್ರ), ಪ್ರಖ್ಯಾತ್ ಡಿ ರೈ (ಬನ್ನೂರು ದಯಾನಂದ ರೈ ಮತ್ತು ಪ್ರತಿಭಾ ಕುಮಾರಿ ಪಿ ರವರ ಪುತ್ರ) ಹಾಗು ಮಾರ್ಗದರ್ಶಕ ಮತ್ತು ಅಟಲ್ ಮೆಂಟರ್‌ರಾಗಿ ಕಾವು ರಂಜಿತಾ ಹೆಚ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯನಿ ಜಯಲಕ್ಷಿ ಎ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.