ಯುವಕರು ಶಕ್ತಿ ಮೀರಿ ದುಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ-ಶ್ರೀಪ್ರಸಾದ್
ಪುತ್ತೂರು: ಪುತ್ತೂರು ನಗರ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಪುತ್ತೂರು ಯುವ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆರವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಯಾವ ರೀತಿಯಲ್ಲಿ ಗೆಲ್ಲಿಸಬೇಕು, ಯುವಕರನ್ನು ಯಾವ ರೀತಿ ಸಜ್ಜುಗೊಳಿಸಬೇಕು ಹಾಗೂ ಸಾಮರಸ್ಯದಿಂದ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಕಾಂಗ್ರೆಸ್ ಗೆಲ್ಲಲಿದೆ. ಯುವಕರು ಎಲ್ಲರೂ ಒಗ್ಗೂಡಿ ಜಾತ್ಯಾತೀತ ತತ್ವದಡಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುವಂತೆ ವಿನಂತಿಸಿದರಲ್ಲದೆ ಯುವಕರು ಶಕ್ತಿ ಮೀರಿ ದುಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಅವರು ಹೇಳಿದರು. ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಯಿತು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಾಜಿ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಅಲಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಮುರಳೀಧರ ರೈ ಮಠಂತಬೆಟ್ಟು, ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ಫಾರೂಕ್ ಪೆರ್ನೆ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಅಮರನಾಥ ಗೌಡ ಬಪ್ಪಳಿಗೆ, ಶೈಲಜಾ ಅಮರನಾಥ ಗೌಡ, ಕೃಷ್ಣಪ್ರಸಾದ್ ಆಳ್ವ, ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ನಗರಸಭಾ ಸದಸ್ಯರಾದ ರಿಯಾಝ್, ರಾಬಿನ್ ತಾವ್ರೋ, ಆಫಿಲ್ ಕೂರ್ನಡ್ಕ, ಸಿಯಾನ್ ದರ್ಬೆ, ರಹೆಮಾನ್ ಕಾವು, ರೋಶನ್ ರೈ ಬನ್ನೂರು, ದಾವುದ್ ಬನ್ನೂರು, ಲೋಕೇಶ್ ಪೆಲತ್ತಡಿ, ಶಮೀಮ್ ಗಾಳಿಮುಖ, ಚೈತ್ರ, ಖಾದರ್ ಪಾಟ್ರಕೋಡಿ, ಸಾಹಿಲ್ ಬನ್ನೂರು, ಹಸೈನಾರ್ ಬನಾರಿ, ಅತೀಕ್, ದಿನೇಶ್, ರಝಾಕ್, ವಿಕ್ರಮ್ ನಝೀರ್, ದಾಮೋದರ ಮುರ, ಕೃಷ್ಣಪ್ರಸಾದ್ ಆಳ್ವ, ದಿನೇಶ್ ಪಿ.ವಿ., ಸಿಯಾನ್ ದರ್ಬೆ, ರಶೀದ್ ಮುರ, ಮಹೇಶ್ ರೈ ಅಂಕೊತ್ತಿಮಾರ್, ಜಯಪ್ರಕಾಶ್ ಬದಿನಾರು, ರಫೀಕ್ ಮೊಟ್ಟೆತ್ತಡ್ಕ, ಅಬೀಬ್ ಕಣ್ಣೂರು, ಶಹನವಾಜ್ ಬಪ್ಪಳಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.