ವಿದ್ಯಾರಶ್ಮಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ

0

ಪುತ್ತೂರು : ಮಾರ್ಚ್ 2023ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ ವಾಣಿಜ್ಯ ವಿಭಾಗದ 25 ಮತ್ತು ವಿಜ್ಞಾನ ವಿಭಾಗದ 9 ಅಭ್ಯರ್ಥಿಗಳು, ಒಟ್ಟು 34 ಅಭ್ಯರ್ಥಿಗಳು ಹಾಜರಾಗಿದ್ದು 31 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.

(7 ವಿಶಿಷ್ಟ ಶ್ರೇಣಿ, 15 ಪ್ರಥಮ ಶ್ರೇಣಿ, 3 ದ್ವಿತೀಯ ಶ್ರೇಣಿ ಮತ್ತು 6 ತೃತೀಯ ಶ್ರೇಣಿ) ಎಂ. ಪ್ರಣವಿ ರೈ (EBAS-577), ಎಂ. ಸುಧಾಕರ ರೈ ಮತ್ತು ದೀಪಿಕಾ ಎಸ್. ರೈ, ಮಾಳ ಇವರ ಮಗಳು, ಮಾನ್ವಿ ಬಿ.ಸಿ. (EBAS-550) ಚಂದ್ರಶೇಖರ ಗೌಡ ಬಿ. ಮತ್ತು ಸುಮಿತ್ರಾ ಬಿ.ಸಿ., ಬೀರುಸಾಗು, ಪೆರುವಾಜೆ ಇವರ ಮಗಳು, ಫಾತಿಮತ್ ನಿಶಾ EBAC-545) ಸುಲೈಮಾನ್ ಮತ್ತು ಜೊಹಾರಾ, ಸವಣೂರು ಇವರ ಮಗಳು, ತೇಜಸ್ ಕೆ. (PCMB-531) ಲೋಕನಾಥ ಮತ್ತು ಶಶಿಕಲಾ, ಕುದ್ಮಾರು ಇವರ ಮಗ, ಹರ್ಷಿತ್ ಕೆ.ಡಿ. (EBAC-526) ಧರ್ಮಪಾಲ ಕೆ.ವಿ. ಮತ್ತು ಧರ್ಮಾವತಿ ಇವರ ಮಗ, ದೋಳ್ಪಾಡಿ, ನಿಶಾಂತ್ ಡಿ.ಎಚ್. (PCMC-521) ಹೊನ್ನಪ್ಪ ಗೌಡ ಮತ್ತು ಸಾವಿತ್ರಿ, ದೋಳ್ಪಾಡಿ ಇವರ ಮಗ ಮತ್ತು ಪ್ರಣವ್ ಕೆ.ಯು.(PCMC-513) ಉಮೇಶ್ ಎಂ. ಮತ್ತು ಶೀಲಾವತಿ ಕೆ, ಸವಣೂರು ಇವರ ಮಗ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಕಾಲೇಜಿನ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here