ಪುತ್ತೂರು: 2023 ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜು ಶೇ. 98 ಫಲಿತಾಂಶವನ್ನು ಪಡೆದಿದೆ.
ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಗಳಿಸುವುದರ ಮೂಲಕ ಪಲ್ಲವಿ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಅನುಶ್ರೀ 583,ಅನುಶ್ರೀ 569,ಸುಭಾಷಿತ 566,ಶ್ರೀನಿಧಿ 565,ಯಜ್ಞಶ್ರೀ 559,ನೇಹಾ ರಾವ್ 556,ನಿಶ್ಮಿತಾ 554,ತೇಜಸ್ ಪಿ. 549,ಚಂದನಾ 543,ಖುಶಿ ಎ. 541,ರಚನಾ 531,ಆಶಿತಾ 517 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ 581 ಅಂಕಗಳನ್ನು ಗಳಿಸುವುದರ ಮೂಲಕ ಬಿ ಪಿ ಸಪ್ತಮಿ ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಕುಶಿತಾ 580,ಅಂಕಿತಾ 576,ಶೃತಿಕಾ 574,ಜಸ್ಮಿತಾ 573,ಸುದೀಪ್ 568,ನಮನ 566,ದೀಪ್ತಿ ಕೆ.ಪಿ. 561,ನಿಽ ರೈ . 561,ಶಮಿತಾ 559,ರಜತ್ ಕಿರಣ್ 557,ಆಪ್ತ ಕೆ.ಎನ್. 556,ಅನ್ವಿತಾ 555,ಅಪರ್ಣಾ 555,ಆದಿರಾ 551,ನಿತ್ಯಶ್ರೀ 550,ನಿಶಾ ಕೆ.ಸಿ. 532,ಶ್ರಾವ್ಯ ಎಮ್ .ಆರ್. 531,ಕಾರ್ತಿಕ್ ಪ್ರಭು 518,ಅಂಕಿತ್ ಪಿ.ಜಿ. 517,ಅದಿತಿ 510 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇ. 98 ಫಲಿತಾಂಶ ಲಭಿಸಿದೆ.
ದ್ವಿತೀಯ ಪಿಯುಸಿಯಲ್ಲಿ ಒಟ್ಟು 34 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಶೇ. 98 ಫಲಿತಾಂಶ ಲಭಿಸಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.