ಪುತ್ತೂರು: ಕಡೇಶಿವಾಲಯ ಮಹಾತೋಭಾರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ದೊಡ್ಡ ರಂಗಪೂಜಾ ಸಮಿತಿಯ ವತಿಯಿಂದ ದೊಡ್ಡ ರಂಗಪೂಜೆಯು ನ.8ರಂದು ಬ್ರಹ್ಮಶ್ರೀ ಉಚ್ಚಿಲಾಂತಾಯ ಪದ್ಮನಾಭ ತಂತ್ರಿಗಳು ನೀಲೇಶ್ವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ನುಲಿಯಾಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಸುಮೋಧರ ಡಿ ಶೆಟ್ಟಿ, ಭವಾನಿ ಶಿಪಿಂಗ್ ಕಂಪನಿ, ಮುಂಬೈ, ಮುಂಬೈಯ ಉದ್ಯಮಿ ಸುನಿಲ್ ಕೃಷ್ಣ ಸುತಾರ್, ಕಡೆಶಿವಾಲಯ ಗ್ರಾಮದ ಗುತ್ತು ಮನೆ ಆರಿಕಲ್ಲು ಗುತ್ತಿನ ಯಜಮಾನ ಅಮರನಾಥ ಜೈನ್ ಆರಿಕಲ್ಲು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ದೇವಸ್ಥಾನದ ನೀಲಿ ನಕ್ಷೆಯನ್ನು ಬಿತ್ತರಿಸಲಾಯಿತು.ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಸುನಿಲ್ ಕೃಷ್ಣ ರವರು ” ನನಗು ಶ್ರೀ ಕ್ಷೇತ್ರಕ್ಕೂ ಋಣಾನು ಸಂಬಂಧವಿದೆ ” ಆದುದರಿಂದಲೇ ಶ್ರೀ ಕ್ಷೇತ್ರಕ್ಕೆ ನಾನು ಈ ದಿನ ಬರಲು ಸ್ಫೂರ್ತಿಯಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ದೊಡ್ಡ ರಂಗ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಕೂಸಪ್ಪ ಪೂಜಾರಿ ಪುನೀಕೇದಡಿ ಹಾಗೂ ಉಪಾಧ್ಯಕ್ಷ ನವೀನ್ ಶೆಟ್ಟಿ ಅಮೈ ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಸುಮೋಧರ ಶೆಟ್ಟಿ ಹಾಗೂ ಉದ್ಯಮಿ ದಂಪತಿಗಳಾದ ಸುನಿಲ್ ಕೃಷ್ಣ ಸುತಾರ್ ರವರನ್ನು ಸನ್ಮಾನಿಸಲಾಯಿತು. ಅಜಿಲ ಮೊಗರು ಕಡೇಶಿವಾಲಯಕ್ಕೆ ದೋಣಿಯ ಮೂಲಕ ಸಂಪರ್ಕ ಕಲ್ಪಿಸುವ ನಾವಿಕ ಇಬ್ರಾಹಿಂ ನಡುಮೊಗರು ಇವರನ್ನು ಸನ್ಮಾನಿಸಲಾಯಿತು.
ದೊಡ್ಡ ರಂಗ ಪೂಜೆಯ ಬಗ್ಗೆ ಸಮಿತಿಯ ಅಧ್ಯಕ್ಷ ಕೂಸಪ್ಪ ಪೂಜಾರಿ ಪುನೀಕೇದಡಿ ಪ್ರಸ್ತಾಪಿಸಿದರು. ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಸದ್ಯಸ್ಯರಾದ ಹಿರಿಯರಾದ ಈಶ್ವರ ಪೂಜಾರಿ ಹಿರ್ತಡ್ಕ, ಚಿದಾನಂದ ಕಡೆಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ,ಸತೀಶ್ಚಂದ್ರ ಶೆಟ್ಟಿ ಭಾವಗುತ್ತು,ಹರಿಶ್ಚಂದ್ರ ಕಾಡಬೆಟ್ಟು ಉಪಸ್ಥಿತರಿದ್ದರು.
ಮೋಹನ್ ಕುಮಾರ್ ಕರ್ನುರು ಸ್ವಾಗತಿಸಿ, ಶೀನ ನಾಯ್ಕ ನೆಕ್ಕಿಲಾಡಿ ವಂದಿಸಿದರು. ಬಿ. ಸಿ ರೋಡಿನ ನ್ಯಾಯವಾದಿ ಮೋಹನ್ ನೆತ್ತರ ಕಾರ್ಯಕ್ರಮ ನಿರೂಪಿಸಿದರು.