ಪುತ್ತೂರು: ’ಕಾಯಕವೇ ಕೈಲಾಸ’ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಒಂದು ವೃತ್ತಿಯನ್ನು ಮಾಡಲೇಬೇಕು. ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ಕೆಲಸವೇ ಪೂಜೆ, ಕೆಲಸವೇ ದೇವರು. ಕೆಲಸದಲ್ಲಿಯೇ ಕೈಲಾಸವನ್ನು ಕಾಣಬೇಕೆಂದು ಹೇಳಿದ ಬಸವಣ್ಣನರವರ ಜಯಂತಿ ಎ.23ರಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
ತಹಸೀಲ್ದಾರ್ ಶಿವಶಂಕರ್ ಅವರು ಬಸವೇಶ್ವರ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಪುಷ್ಪಾರ್ಚಣೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಉಪತಹಶೀಲ್ದಾರ್ ಸುಲೋಚನಾ ಸಹಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.