ಯೋಗಜೀವನ ದರ್ಶನ-2023- ಯೋಗ ಪ್ರಶಿಕ್ಷಣ ಶಿಬಿರದ ಸಮಾರೋಪ

0

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ. ನೇತ್ರಾವತಿ ವಲಯ, ಪುತ್ತೂರು, ದ.ಕ.ಜಿಲ್ಲೆ. ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಪೌಂಡೇಶನ್ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ಗುರುವಾರ ಮೂರು ವಿಭಾಗಗಳಲ್ಲಿ ಉದ್ಘಾಟನೆಗೊಂಡಿದ್ದ ಯೋಗ-ಜೀವನ-ದರ್ಶನ-2023 ಯೋಗ ಪ್ರಶಿಕ್ಷಣ ಶಿಬಿರವು ಭಾನುವಾರ ಸಮಾರೋಪಗೊಂಡಿತು.

ಸಾಮಾನ್ಯ ಯೋಗ ಪ್ರಶಿಕ್ಷಣ ಶಿಬಿರವನ್ನು ಪುತ್ತೂರು ನಗರ ಸಭೆ ಆಯುಕ್ತರಾದ ಶ್ರೀ ಮಧು ಮನೋಹರ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

ಶ್ರೀ ರವೀಂದ್ರ ಭಟ್ ಪ್ರಧಾನ ಅರ್ಚಕರು ಶ್ರೀ ಲ. ವೆಂ. ದೇವಸ್ಥಾನ ಉಪ್ಪಿನಂಗಡಿ ಇವರ ಆಶೀರ್ವಾಚನದೊಂದಿಗೆ ಶ್ರೀ ನಾರಾಯಣ, ಜಿಲ್ಲಾ ಸಹ ಸಂಚಾಲಕರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ಹರೀಶ್ ಕೋಟ್ಯಾನ್, ಪ್ರಾಂತ ಸಂಚಾಲಕರು ಸಂಘಟನಾ ವಿಭಾಗ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶ್ರೀ ಕೃಷ್ಣ ಭಟ್ ಕೆ ಎಮ್. ಕೊಂಕೋಡಿ, ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.) ಮುಖ್ಯ ಅತಿಥಿಗಳಾಗಿದ್ದರು. ಮಕ್ಕಳ ವಿಭಾಗದ ಉದ್ಘಾಟನೆಯನ್ನು ಶ್ರೀ ಪ್ರಸಾದ್, ಪ್ರಾಂಶುಪಾಲರು, ನರೇಂದ್ರ ಪ. ಪೂ. ಕಾಲೇಜು ಇವರು ನೆರವೇರಿಸಿದರೆ, ಶಿಕ್ಷಕರಾದ ಶ್ರೀ ರಾಮಚಂದ್ರ, ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬೆಟ್ಟ ಈಶ್ವರ ಭಟ್ ಹಿರಿಯ ನ್ಯಾಯವಾದಿಗಳು ಮುಖ್ಯ ಅತಿಥಿಗಳಾಗಿದ್ದರು. ಹಿರಿಯರ ವಿಭಾಗದ ಉದ್ಘಾಟನೆಯನ್ನು ಶ್ರೀಯುತ ಇಂಡಾಜೆ ಎಸ್ ವಿನಾಯಕ ನಾಯಕ್ ಉದ್ಯಮಿಗಳು ಇವರು ನೆರವೇರಿಸಿದರೆ, ಶಿಕ್ಷಕರಾದ ಶ್ರೀ ಶಾಂತ ಕುಮಾರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪುತ್ತೂರು ಚೇಂಬರ್ ಆಫ್ ಕೋಮರ್ಸ್ ನ ಮಾಜಿ ಅಧ್ಯಕ್ಷರರಾದ ಶ್ರೀಯುತ ಕೇಶವ ಪೈ, ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಜಗನ್ನಾಥ ಜಿಲ್ಲಾ ಸಂಘಟನಾ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶುಕ್ರವಾರ ನಡೆದ ಮಾತೃ ಪೂಜನ, ಮಾತೃ ಭೋಜನ ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಬೆಳ್ಳಾರೆ ಮುಖ್ಯೋಪಾಧ್ಯಾಯರು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಹಾಗೂ ಶ್ರೀಮತಿ ಕಾವ್ಯ ಶ್ರೀ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು ಪುತ್ತೂರು, ಇವರುಗಳು ಅತಿಥಿಗಳಾಗಿದ್ದು ಶ್ರೀಯುತ ರವೀಶ ಕುಮಾರ್ ಪ್ರಾಂತ ಸಂಚಾಲಕರು ಸೇವಾ ವಿಭಾಗ ಹಾಗೂ ಲಕ್ಷ್ಮೀ ನಾರಾಯಣ ಜಿಲ್ಲಾ ಸಂಸ್ಕಾರ ಪ್ರಮುಖರು ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು. ಶನಿವಾರ ಡಾ. ವೀರಯ್ಯ ಹಿರೇಮಠ, ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ದ. ಕ. ಇವರು “ಆರೋಗ್ಯದೆಡೆಗೆ ಯೋಗ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 650 ಯೋಗಪಟುಗಳು ಕೋರ್ಟ್ ರಸ್ತೆ, ಪುತ್ತೂರು ಮುಖ್ಯ ರಸ್ತೆ, ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ, ಶ್ರೀಧರ ಭಟ್ ಬಿಲ್ಡಿಂಗ್ ಮೂಲಕ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ತೆಂಕಿಲ ಪುತ್ತೂರು ಆಟದ ಮೈದಾನದ ತನಕ ಯೋಗ ನಡಿಗೆಯಲ್ಲಿ ಪಾಲ್ಗೊಂಡರು.


ಭಾನುವಾರ ಪೂರ್ವಾಹ್ನ ಮೂರೂ ವಿಭಾಗಗಳ ಶಿಬಿರಗಳು ಸಮಾರೋಪಗೊಂಡಿತು. ಶ್ರೀ ಯೋಗೀಶ್ , ತಾಲೂಕು ಸಂಚಾಲಕರು, ಶ್ರೀ ನವೀನ್ ಭಂಡಾರಿ, ಪುತ್ತೂರು ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ, ಶ್ರೀ ಲೋಕೇಶ ಜಿಲ್ಲಾ ಪ್ರಶಿಕ್ಷಣ ಪ್ರಮುಖರು, ಶ್ರೀ ಕೃಷ್ಣಾನಂದ, ವ್ಯವಸ್ಥಾಪನಾ ಸಂಚಾಲಕರು, ಶ್ರೀ ಶಿವ ಪ್ರಸಾದ್ ಜಿಲ್ಲಾ ಪ್ರಮುಖರು, ಶ್ರೀ ಅಚ್ಯುತ ನಾಯಕ್, ಕುಟುಂಬ ಪ್ರಭೋಧನ್ ಮಂಗಳೂರು ವಿಭಾಗ ಸಹ ಸಂಚಾಲಕರು, ಶ್ರೀ ಸತ್ಯ ಶಂಕರ ಕೆ, ವ್ಯವಸ್ಥಾಪಕ ನಿರ್ದೇಶಕರು, ಶಂಕರ್ ಸಮೂಹ ಸಂಸ್ಥೆ ಪುತ್ತೂರು, ಶ್ರೀ ಹರಿಪ್ರಸಾದ್ ಮುಖ್ಯ ಶಿಕ್ಷಕರು, ಶ್ರೀ ಅಶೋಕ ನೇತ್ರಾವತಿ ವಲಯ ಸಂಯೋಜಕರು, ಅತಿಥಿಗಳಾಗಿ ಶ್ರೀ ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣ ಅಧಿಕಾರಿ, ಕರಾರಸಾನಿ ಇವರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ಸಮಾರೋಪ ಸಮಾರಂಭ ಜರುಗಿತು.
ಶಿಬಿರದಲ್ಲಿ ಯೋಗಾಸನ, ಭಾರತೀಯ ಜೀವನ ಪದ್ದತಿ, ಆಯುರ್ವೇದ ಪದ್ಧತಿ ಆಹಾರ ಕ್ರಮ, ಚಿಕಿತ್ಸಾ ಯೋಗ ಕ್ರಮ ಕಲಿಸಲಾಯಿತು. ಮಕ್ಕಳಿಗೆ ದೇಶದ ಸೇನೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 94 ಮಕ್ಕಳ ಸಹಿತ 277 ಪ್ರಶಿಕ್ಷಣಾರ್ಥಿಗಳು, 57 ಶಿಕ್ಷಕರು ಹಾಗೂ 200 ಪ್ರಬಂಧಕರು,ಹಾಗೂ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದ ಮುಖ್ಯ ಶಿಕ್ಷಕರಾಗಿ ಶಿವಾನಂದ ರೈ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಯುತ ಎ. ಆರ್. ರಾಮಸ್ವಾಮಿ, ರಾಘವೇಂದ್ರ ಪ್ರಾಂತ ಸಂಯೋಜಕರು, ಪ್ರಮುಖರಾದ ಅಶೋಕ್ ಕುಮಾರ್ ಜೈನ್, ಕನಕ ಅಮಿನ್,ಪ್ರತಾಪ್ ಕೆ. ಎಸ್.,ಹರೀಶ್ ಅಂಚನ್, ಗಣೇಶ್ ಸುವರ್ಣ, ಅಕ್ಷತ್ ಕುಮಾರ್, ಕಾರ್ಯಕ್ರಮ ಸಂಚಾಲಕರಾದ ಕೃಷ್ಣಾನಂದ ನಾಯಕ್, ಆಶಾಲತಾ ರಮೇಶ್, ವಸಂತ ಸುವರ್ಣ ಪುತ್ತೂರು ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here