ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಬುಳೆನಡ್ಕ ವಿಷ್ಣು ಭಟ್ ಇವರ ಮನೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ಏ.23ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ ಹಿಂದಿನ ಕಾಂಗ್ರೆಸ್ ಮತ್ತು ಜನತಾದಳ ಸರಕಾರಗಳು ಮಾಡದ ಅಭಿವೃದ್ಧಿ ಕೆಲಸಗಳನ್ನು ನಮ್ಮ ಬಿಜೆಪಿ ಸರಕಾರ ಕೆಲವೇ ಸಮಯದಲ್ಲಿ ಮಾಡಿ ತೋರಿಸಿದೆ. ಹಳ್ಳಿಯ ಪ್ರತಿ ರಸ್ತೆ ಕಾಂಕ್ರೀಟ್, ಕುಡಿಯುವ ನೀರು, ಕಿಂಡಿ ಅಣೆಕಟ್ಟು, ಶಾಲೆಗಳ ಅಭಿವೃದ್ಧಿ ಸೇರಿದಂತೆ ಮೂರು ವಾರ್ಡ್ ಇರುವ ಕುಗ್ರಾಮ ನಿಡ್ಪಳ್ಳಿ ಗ್ರಾಮಕ್ಕೆ ಸುಮಾರು ರೂ.29 ಕೋಟಿ ರೂಪಾಯಿ ಅನುದಾನ ನೀಡಿದ್ದು ಹಿಂದೆಂದೂ ಆಗದ ಅಭಿವೃದ್ಧಿ ಕೆಲಸ ನಡೆದಿದ್ದು ಇದನ್ನು ಪ್ರತಿ ಮನೆಗೆ ಭೇಟಿ ನೀಡಿ ಜನರಿಗೆ ತಿಳಿಸಿ ಮತಗಳಾಗಿ ಪರಿವರ್ತಿಸುವ ಕೆಲಸ ಕಾರ್ಯಕರ್ತರಿಂದಾಗ ಬೇಕು. ಮತ್ತೆ ನಮ್ಮ ಬಿಜೆಪಿ ಸರಕಾರ ಬಂದು ಇನ್ನಷ್ಟೂ ಅಭಿವೃದ್ಧಿ ಹೊಂದಲು ನಮ್ಮ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಹಿರಿಯರಾದ ರಂಗನಾಥ ರೈ ಗುತ್ತು ಮಾತನಾಡಿ ಕಾರ್ಯಕರ್ತರು ಪ್ರತಿ ಮನೆ ಮನೆ ಭೇಟಿ ಮಾಡಿ ಹಿಂದಿನ ಬಿಜೆಪಿ ಸರಕಾರ ಮಾಡಿದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು. ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ ತನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರು ಶ್ರಮ ವಹಿಸುವಂತೆ ವಿನಂತಿಸಿದರು.
ಬೂಡಿಯಾರ್ ರಾಧಾಕೃಷ್ಣ ರೈ, ಸುಧೀರ್ ಕುಮಾರ್ ರೈ, ಅಪ್ಪಯ್ಯ ಮಣಿಯಾಣಿ ಆರ್ ಸಿ ನಾರಾಯಣ ರೆಂಜ, ತ್ರಿವೇಣಿ ಕರುಣಾಕರ ಪೆರುವೋಡಿ, ಮೀನಾಕ್ಷಿ ಮಂಜುನಾಥ,ನಿತೀಶ್ ಕುಮಾರ್ ಶಾಂತಿವನ ರಾಧಾಕೃಷ್ಣ ಬೋರ್ಕರ್ ಕತ್ತಲೆಕಾನ ಮುಂತಾದವರು ಉಪಸ್ಥಿತರಿದ್ದರು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ.ಡಿ ಹಾಗೂ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ಪದ್ಮನಾಭ ಬೋರ್ಕರ್ ವಂದಿಸಿದರು.