ಪುತ್ತೂರು: 80 ವರ್ಷಕ್ಕೆ ಮೇಲ್ಪಟ್ಟ ಹಿರಿಯರಿಗೆ ಮತ್ತು ಅಂಗವಿಕಲರು ಮನೆಯಲ್ಲೇ ಮತದಾನಕ್ಕೆ ಬಯಸಿದ್ದಲ್ಲಿ ಮನೆ ಮನೆ ಭೇಟಿ ಮಾಡಿ ಮತದಾನ ಮಾಡಿಸುವ ಕಾರ್ಯಕ್ಕೆ ಸಂಬಂಧಿಸಿ ನಿಯೋಜಿತ ಮತದಾನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಎ.23ರಂದು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಇದೇ ಮೊದಲ ಬಾರಿಗೆ ನಾವು ಕರ್ನಾಟಕದಲ್ಲಿ 80 ವರ್ಷಕ್ಕೂ ಮೇಲ್ಪಟ್ಟ ಮತ್ತು ಅಂಗವಿಕಲರು (ಪಿಡಬ್ಲ್ಯೂಡಿ) ಮತದಾರರು ಬಯಸಿದಲ್ಲಿ ಅವರಿಗೆ ಮನೆಗಳಿಂದಲೂ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಲಿದ್ದು, ಅವರಿಗೆ ಫಾರ್ಮ್ 12 ಡಿ ಒಳಗೆ ಲಭ್ಯವಿರುತ್ತದೆ. ಅಧಿಸೂಚನೆಯ ಐದು ದಿನಗಳ ನಂತರ ಯಾವುದೇ 80 ಪ್ಲಸ್ ಅಥವಾ ಅಂಗವಿಕಲ ಮತದಾರರು ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಳಲಾಗುವುದು.
ಎ.29 ರಿಂದ ಮೇ 6ರ ತನಕ ಅವರಿಗೆ ಮತದಾನ ಮಾಡಿಸುವ ಕಾರ್ಯ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಿಯೋಜನೆ ಮಾಡಲದ ಮತದಾನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಮಾಸ್ಟರ್ ಟ್ರೈನರ್ ಅಗಿರುವ ಶ್ರೀ ಮಹಾಲಿಂಗೇಶ್ವರ ಐಟಿಐಯ ತರಬೇತುದಾರ ಪ್ರಶಾಂತ್ ನಾಯಕ್, ವಿವೇಕಾನಂದ ಇಂಜಿನಿಯರ್ ಕಾಲೇಜಿನ ಹರಿಪ್ರಸಾದ್, ವಿವೇಕಾನಂದ ಕಾಲೇಜು ಪ್ರಾಂಶುಪಾಲ ವಿ.ಜಿ.ಭಟ್ ತರಬೇತಿ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕು ಕಚೇರಿಯಲ್ಲೂ ಪೊಲೀಂಗ್ ಆಫೀಸರ್‌ಗಳಾಗಿ ಹೆಚ್ಚುವರಿಯಾಗಿ ನೇಮಗೊಂಡವರಿಗೂ ತರಬೇತಿ ಕಾರ್ಯಕ್ರಮ ನಡೆಯಿತು.