ಸವಣೂರಿನಲ್ಲಿ ರಶ್ಮಿ ನಿವಾಸ 30ರ ಸಂಭ್ರಮ-ಸಮಾಜದ ಹಿತಕ್ಕಾಗಿ ಸೀತಾರಾಮ ರೈಯವರ ಬದುಕು- ಓಡಿಯೂರು ಶ್ರೀ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈಯವರ ಸವಣೂರಿನ ರಶ್ಮಿ ನಿವಾಸಕ್ಕೆ 30 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಶ್ಮಿ ನಿವಾಸ 30ರ ಸಂಭ್ರಮ ಕಾರ್ಯಕ್ರಮ ಏ. 25 ರಂದು ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಿತು.


ಪೂರ್ವಾಹ್ನ ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯರ ನೇತೃತ್ವದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ರಾಮಕೃಷ್ಣ ಕಾಟು ಕುಕ್ಕೆ ಬಳಗದ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ‍್ಯಕ್ರಮವನ್ನು ಪುರೋಹಿತ ನರಸಿಂಹ ಪ್ರಸಾದ್ ಪಾಂಗಣ್ಣಾಯರವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿದರು. ಕಸ್ತೂರಿ ಕಲಾ ಎಸ್ ರೈ, ಅಶ್ವಿನ್ ಎಲ್ ಶೆಟ್ಟಿ, ರಶ್ಮಿ ಅಶ್ವಿನ್ ಶೆಟ್ಟಿ, ದೀಪಾಂಜಲಿ ಮಹಿಳಾ ಭಜನಾ ತಂಡದ ಇಂದಿರಾ ಬಿ.ಕೆ, ಹರ್ಷ ಕರುಣಾಕರವರು ಉಪಸ್ಥಿತರಿದ್ದರು.
ಸಮಾಜದ ಹಿತಕ್ಕಾಗಿ ಸೀತಾರಾಮ ರೈಯವರ ಬದುಕು- ಓಡಿಯೂರು ಶ್ರೀ
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಕ್ಷೇತ್ರ ಒಡಿಯೂರು ಇಲ್ಲಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸವಣೂರು ಸೀತಾರಾಮ ರೈಯವರು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಎಲ್ಲರನ್ನು ಗೌರವದಿಂದ ಕಾಣುವ ರೈಯವರು ಸಹಕಾರ, ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಈ ಸಂದರ್ಭ ಗೌರವಾರ್ಪಣೆ ನಡೆಯಿತು. ಸವಣೂರು ಕೆ. ಸೀತಾರಾಮ ರೈಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಸವಣೂರು ಸುಂದರ ರೈ, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಪುರೋಹಿತರಾದ ನರಸಿಂಹ ಪ್ರಸಾದ್ ಪಾಂಗಣ್ಣಾಯ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಶ್ರೀ ಜೆ ರೈ ಮತ್ತು ಕಸ್ತೂರಿಕಲಾ ಎಸ್. ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನ್ ಎಲ್. ಶೆಟ್ಟಿ ಮತ್ತು ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ ವಂದಿಸಿದರು. ಪುತ್ತೂರು ರೋಟರಿ ಕ್ಲಬ್‌ನ ಆಶ್ರಯದಲ್ಲಿ ಪ್ರಾರಂಭವಾಗುತ್ತಿರುವ ವಿಶೇಷ ಚೇತನ ಮಕ್ಕಳ ಶಾಲೆಗೆ ರೂ.25 ಸಾವಿರ ಧನ ಸಹಾಯವನ್ನು ಕ್ಲಬ್‌ನ ಅಧ್ಯಕ್ಷ ಶರತ್ ಕುಮಾರ್ ರೈ ದೇವಸ್ಯ, ಪದಾಧಿಕಾರಿಗಳಾದ ಸುಜಿತ್ ಕುಮಾರ್ ಶೆಟ್ಟಿ , ವಸಂತ ಜಾಲಾಡಿರವರಿಗೆ ಹಸ್ತಾಂತರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು. ಸುಳ್ಯ, ಪುತ್ತೂರಿನ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸೀತಾರಾಮ ರೈಯವರ ಅಭಿಮಾನಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸೀತಾರಾಮ ರೈಯವರ ಜೀವನ ಸಮಾಜಕ್ಕೆ ಮಾದರಿ
ತನ್ನನ್ನು ತಾನು ಅರಿತುಕೊಂಡರೆ ಅಲ್ಲಿ ಆನಂದ ತುಂಬಿಕೊಂಡಿರುತ್ತದೆ. ಸವಣೂರು ಸೀತಾರಾಮ ರೈಯವರು ಜೀವನದಲ್ಲಿ ನಡೆಸಿಕೊಂಡು ಬಂದಿರುವ ಸಮಯಪಾಲನೆ, ಕಾರ್ಯಕ್ರಮದಲ್ಲಿ ಅಚ್ಚುಕಟ್ಟು ಎಲ್ಲವೂ ಸಮಾಜಕ್ಕೆ ಮಾದರಿ – ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

LEAVE A REPLY

Please enter your comment!
Please enter your name here