ಪುತ್ತೂರು: 2023 ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕವಾದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳು ಅಂಚೆ ಮತದಾನಕ್ಕೆ ನಮೂನೆ 12ರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ಎ.30ರಂದು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಅವಕಾಶ ನೀಡಲಾಗುವುದು.
ಎ.30ರಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿ.ಆರ್.ಓ / ಎ.ಪಿ.ಆರ್.ಓ ಗಳಿಗೆ ನಡೆಯುವ ಪೋಲಿಂಗ್ ತರಬೇತಿಯಲ್ಲಿ ಹಾಜರಾಗುವ ಸಂದರ್ಭದಲ್ಲಿ ಮತ ಪತ್ರಗಳನ್ನು ಪಡೆದು ತಮ್ಮ ಮತಗಳನ್ನು ಅಲ್ಲೇ ಚಲಾಯಿಸಲು ಪಿ.ವಿ.ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಮತದಾನ ಗಜೆಟೆಡ್ ಅಧಿಕಾರಿಯವರ ಮೂಲಕ ಪರಿಶೀಲನೆಗೊಳಪಡಿಸಿದ ನಂತರ 206 ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಇತರೇ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಕಾರ್ಯ ನಿಮಿತ್ತ ನೇಮಕವಾದ ಅಧಿಕಾರಿ/ ಸಿಬ್ಬಂದಿ ವರ್ಗದವರು ಪಿವಿಸಿ ಕೇಂದ್ರದಲ್ಲಿ ಮತ ಚಲಾಯಿಸಬಹುದಾಗಿದೆ ಎಂದು ಚುನಾವಣಾಧಿಕಾರಿ ಗಿರೀಶ್‌ನಂದನ್ ಅವರು ತಿಳಿಸಿದ್ದಾರೆ.