ಮೇ 1ರಿಂದ ಮೂರು ದಿನ ಹಿರಿಯ ನಾಗರಿಕರಿಗೆ, ವಿಕಲಚೇತನ, ಕೋವಿಡ್ ಪೀಡಿತರಿಗೆ ಮನೆಯಲ್ಲೇ ಮತದಾನ-ಸಂಬಂದಿಸಿದ ಮತದಾರರು ಮನೆಯಲ್ಲಿರುವಂತೆ ಚುನಾವಣಾಧಿಕಾರಿಯಿಂದ ವಿನಂತಿ

0

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1299 ಹಿರಿಯ ನಾಗರಿಕ ಮತದಾರರು
298 ಮಂದಿ ವಿಕಲಚೇತನರು(ಪಿಡಬ್ಲ್ಯುಡಿ) ಮತದಾರರು

ಪುತ್ತೂರು: 2023 ವಿದಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ 80 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನ(ಪಿಡಬ್ಲ್ಯುಡಿ) ಮತ್ತು ಕೋವಿಡ್ ಪೀಡಿತರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೇ 1 ರಿಂದ 3 ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭ ಅಧಿಕಾರಿ, ಸಿಬ್ಬಂದಿವರ್ಗದ ತಂಡದವರು ಮನೆಗೆ ಭೇಟಿ ನೀಡುವ ಸಂದರ್ಭ ಸಂಬಂಧಿಸಿದ ಮತದಾರರು ಮನೆಯಲ್ಲೇ ಇರುವಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಗಿರೀಶ್‌ನಂದನ್ ಅವರು ತಿಳಿಸಿದ್ದಾರೆ.


ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1299 ಮಂದಿ 80 ವರ್ಷಕ್ಕೆ ಮೆಲ್ಪಟ್ಟ ಹಿರಿಯ ನಾಗರಿಕ ಮತದಾರರು, 298 ವಿಕಲಚೇತನ (ಪಿಡಬ್ಲ್ಯುಡಿ) ಮತದಾರರು 12 ಡಿ ನಮೂನೆಯಲ್ಲಿ ಮನೆಯಲ್ಲಿ ಮತದಾನ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ವಿಧಾನಸಭಾ ಕ್ಷೇತ್ರದಡಿ ಮನೆ ಮನೆ ಭೇಟಿ ಅಂಚೆ ಮತದಾನವು ಮೇ 1 ರಿಂದ 3ರ ತನಕ ಮೂರು ದಿನ ನಡೆಯಲಿದೆ.

ಈ ಸಂದರ್ಭದಲ್ಲಿ ಮತದಾನ ಕಾರ್ಯ ನಿರ್ವಹಿಸುವ ಅಧಿಕಾರಿ ಸಿಬ್ಬಂದಿ ವರ್ಗದ ತಂಡದವರು ಮನೆಗೆ ಭೇಟಿ ಮಾಡಲಿದ್ದಾರೆ. 12 ಡಿಯಲ್ಲಿ ಅರ್ಜಿ ಸಲ್ಲಿಸಿದ ಮತದಾರರು ತಮ್ಮ ಮನೆಯಲ್ಲಿ ಮತದಾನನಕ್ಕೆ ಲಭ್ಯವಿರಲು ಕೋರಲಾಗಿದೆ. ಮನೆ ಭೇಟಿ ದಿನಾಂಕ ಮತ್ತು ಸಮಯವನ್ನು ಪ್ರತಿ ಮತದಾರರಿಗೆ ಬಿ.ಎಲ್.ಓ ರವರು ಮುಂಚಿತವಾಗಿ ತಿಳಿಸಲಿದ್ದು, ತಮಗೆ ತಿಳಿಸಿದ ದಿನಾಂಕದಂದು ಮತದಾನ ಕಾರ್ಯಕ್ಕೆ ತಂಡ 2 ಬಾರಿ ತಮ್ಮ ಮನೆಗೆ ಭೇಟಿ ನೀಡಿದಾಗ ಮತದಾರರು ಮನೆಯಲ್ಲಿ ಲಭವಿಲ್ಲದಿದ್ದಲ್ಲಿ ಮತದಾರರಿಗೆ ಮುಂದೆ ಮತದಾನ ಮಾಡಲು ಅವಕಾಶ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ 12ಡಿಯಲ್ಲಿ ಅರ್ಜಿ ನೀಡಿದ ಎಲ್ಲಾ ಮತದಾರರು ಮನೆಯಲ್ಲಿ ಹಾಜರಿದ್ದು, ಮತದಾನಕ್ಕೆ ಸಹಿರಿಸುವಂತೆ ಚುನಾವಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here