43,701 ಮಂದಿ ಹೊಸ ಮತದಾರರ ಸೇರ್ಪಡೆ…. ದ.ಕ.ಜಿಲ್ಲೆಯಲ್ಲಿ 17,81,389 ಮತದಾರರು; 8 ಕ್ಷೇತ್ರಗಳಲ್ಲಿ 60 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

0

ಮಂಗಳೂರು: ದ.ಕ.ಜಿಲ್ಲೆಯಲ್ಲಿ 43,701 ಹೊಸ ಮತದಾರರ ಸೇರ್ಪಡೆಯಾಗಿದ್ದು ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದ.ಕ.ಜಿಲ್ಲೆಯಲ್ಲಿ 8,70,991 ಪುರುಷರು ಮತ್ತು 9,10,314 ಮಹಿಳೆಯರು ಸೇರಿದಂತೆ 17,81,389 ಮತದಾರರು ಅವಕಾಶ ಪಡೆದಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ 2023ರ ಜನವರಿ 5ಕ್ಕೆ ದ.ಕ ಜಿಲ್ಲೆಯಲ್ಲಿ 8,50,552 ಪುರುಷರು ಮತ್ತು 8,87,060 ಮಹಿಳಾ ಮತದಾರರು ಸೇರಿ 17,37,688 ಮತದಾನದ ಅವಕಾಶ ಪಡೆದಿದ್ದರು. ಬಳಿಕ ಚುನಾವಣಾ ಆಯೋಗವು ಏ.11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕಾಲಾವಕಾಶ ನೀಡಿತ್ತು. ಅದರಂತೆ 43,701 ಹೊಸ ಮತದಾರರ ಸೇರ್ಪಡೆಯಾಗಿದ್ದು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು 8,70,991 ಪುರುಷರು ಮತ್ತು 9,10,314 ಮಹಿಳೆಯರು ಸೇರಿದಂತೆ ದ.ಕ ಜಿಲ್ಲೆಯಲ್ಲಿ 17,81,389 ಮತದಾರರು ಅವಕಾಶ ಪಡೆದಿದ್ದಾರೆ.

ಚುನಾವಣೆ ಘೋಷಣೆಗೂ ಮುನ್ನ ಪುತ್ತೂರಿನಲ್ಲಿ 2,08,275 ಇದ್ದ ಮತದಾರರ ಸಂಖ್ಯೆ ಈಗ 2,12,753ಕ್ಕೇರಿದೆ.ಸುಳ್ಯದಲ್ಲಿ 2,01,976 ಇದ್ದುದು ಪ್ರಸ್ತುತ 2,06,029 ಕ್ಕೇರಿದೆ. ಬಂಟ್ವಾಳದಲ್ಲಿ 2,22,901 ಇದ್ದುದು ಈಗ 2,28,377 ಕ್ಕೇರಿದೆ. ಉಳಿದಂತೆ, ಬೆಳ್ತಂಗಡಿಯಲ್ಲಿ ಚುನಾವಣೆಗೆ ಮೊದಲು 2,22,144 ಮತದಾರರಿದ್ದರೆ ಈಗ 2,28,871ಕ್ಕೇರಿದೆ. ಮೂಡುಬಿದಿರೆಯಲ್ಲಿ 2,00,303 ಮತದಾರರಿದ್ದುದು ಪ್ರಸ್ತುತ 2,05,065ಕ್ಕೇರಿದೆ. ಮಂಗಳೂರು ಉತ್ತರದಲ್ಲಿ 2,42,186 ಇದ್ದುದು, ಪ್ರಸ್ತುತ 2,49,421 ಕ್ಕೇರಿದೆ. ಮಂಗಳೂರು ನಗರ ದಕ್ಷಿಣದಲ್ಲಿ 2,39,905 ಇದ್ದುದು ಈಗ 2,45,744ಕ್ಕೇರಿದೆ. ಮಂಗಳೂರು ಕ್ಷೇತ್ರದಲ್ಲಿ 2,00,001 ಇದ್ದುದು ಈಗ 2,05,129ಕ್ಕೇರಿದೆ.

60 ಅಭ್ಯರ್ಥಿಗಳು ಅಂತಿಮ ಕಣದಲ್ಲಿ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಸೇರಿದಂತೆ ಮೇ 10ರ ವಿಧಾನಸಭಾ ಚುನಾವಣೆಗೆ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ ಒಟ್ಟು 60 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಇವರಲ್ಲಿ 8 ಮಂದಿ ಮಹಿಳೆಯರಾಗಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಶೋಕ್ ಕುಮಾರ್ ರೈ, ಬಿಜೆಪಿಯಿಂದ ಆಶಾತಿಮ್ಮಪ್ಪ ಗೌಡ, ಜೆಡಿಎಸ್‌ನಿಂದ ದಿವ್ಯಪ್ರಭಾ ಚಿಲ್ತಡ್ಕ, ಆಮ್ ಆದ್ಮಿಯಿಂದ ಡಾ|ಬಿ.ಕೆ.ವಿಶು ಕುಮಾರ್, ಎಸ್‌ಡಿಪಿಐನಿಂದ ಇಸ್ಮಾಯಿಲ್ ಶಾಫಿ ಬೆಳ್ಳಾರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಐವನ್ ಫೆರಾವೋ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ, ಸುಂದರ ಕೊಯಿಲ ಕಣದಲ್ಲಿದ್ದಾರೆ.

ಕಡಬ ತಾಲೂಕಿನ 46 ಗ್ರಾಮಗಳ ವ್ಯಾಪ್ತಿಯನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ, ಕಾಂಗ್ರೆಸ್‌ನಿಂದ ಜಿ.ಕೃಷ್ಣಪ್ಪ, ಆಮ್ ಆದ್ಮಿಯಿಂದ ಸುಮನಾ ಬೆಳ್ಳಾರ್ಕರ್, ಜೆಡಿಎಸ್‌ನಿಂದ ಎಚ್.ಎಲ್.ವೆಂಕಟೇಶ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಣೇಶ್ ಎಂ., ಉತ್ತಮ ಪ್ರಜಾಕೀಯದಿಂದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರ ಹಾಗು ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಅಂತಿಮ ಕಣದಲ್ಲಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಾಂಗ್ರೆಸ್‌ನಿಂದ ಬಿ.ರಮಾನಾಥ ರೈ, ಜೆಡಿಎಸ್‌ನಿಂದ ಪ್ರಕಾಶ್ ಗೋಮ್ಸ್, ಆಮ್ ಆದ್ಮಿ ಪಾರ್ಟಿಯಿಂದ ಪುರುಷೋತ್ತಮ ಗೌಡ ಕೋಲ್ಪೆ ಹಾಗೂ ಎಸ್‌ಡಿಪಿಐನಿಂದ ಇಲ್ಯಾಸ್ ಮೊಹಮ್ಮದ್ ಅಂತಿಮ ಕಣದಲ್ಲಿದ್ದಾರೆ. ಜಿಲ್ಲೆಯ ಇತರ 5 ಕ್ಷೇತ್ರಗಳಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿದೆ.

ಬೆಳ್ತಂಗಡಿ: ಹರೀಶ್ ಪೂಂಜ-ಬಿಜೆಪಿ, ರಕ್ಷಿತ್ ಶಿವರಾಂ-ಕಾಂಗ್ರೆಸ್,ಅಶ್ರಫ್ಅಲಿ ಕುಂಞ-ಜೆಡಿಎಸ್, ಅಕ್ಬರ್-ಎಸ್‌ಡಿಪಿಐ, ಜನಾರ್ದನ-ಆಮ್ ಆದ್ಮಿ,ಆದಿತ್ಯ ನಾರಾಯಣ ಕೊಲ್ಲಾಜೆ-ಸರ್ವೋದಯ ಕರ್ನಾಟಕ ಪಕ್ಷ, ಶೈಲೇಶ್ ಆರ್‌ಜೆ-ತುಳುವರೆ ಪಕ್ಷ,ಮಹೇಶ್-ಪಕ್ಷೇತರ.‌

ಮೂಡುಬಿದಿರೆ: ಮಿಥುನ್ ರೈ ಎಂ-ಕಾಂಗ್ರೆಸ್, ಉಮನಾಥ ಕೋಟ್ಯಾನ್-ಬಿಜೆಪಿ,ಅಮರಶ್ರೀ ಅಮರನಾಥ ಶೆಟ್ಟಿ-ಜೆಡಿಎಸ್,ಆಲೋನ್ಸೋ ಫ್ರಾಂಕೋ-ಎಸ್‌ಡಿಪಿಐ, ವಿಜಯನಾಥ ವಿಠಲ ಶೆಟ್ಟಿ-ಆಮ್ ಆದ್ಮಿ, ದಯಾನಂದ-ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಈಶ್ವರ ಎಸ್.,ದುರ್ಗಾಪ್ರಸಾದ್-ಪಕ್ಷೇತರರು.

ಮಂಗಳೂರು ನಗರ ಉತ್ತರ: ಇನಾಯತ್ ಅಲಿ-ಕಾಂಗ್ರೆಸ್, ಡಾ.ವೈ.ಭರತ್ ಶೆಟ್ಟಿ-ಬಿಜೆಪಿ,ಬಿ.ಎ.ಮೊಯ್ದಿನ್ ಬಾವ-ಜೆಡಿಎಸ್,ಸಂದೀಪ್ ಶೆಟ್ಟಿ-ಆಮ್ ಆದ್ಮಿ ಪಾರ್ಟಿ,ಧರ್ಮೇಂದ್ರ-ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ,ಬಿ.ಪ್ರವೀಣ್‌ಚಂದ್ರ ರಾವ್-ಹಿಂದುಸ್ತಾನ್ ಜನತಾ ಪಕ್ಷ ಸೆಕ್ಯುಲರ್,ಪ್ರಶಾಂತ್-ಉತ್ತಮ ಪ್ರಜಾಕೀಯ ಪಾರ್ಟಿ,ಯಶೋಧಾ-ಕರ್ನಾಟಕ ರಾಷ್ಟ್ರ ಸಮಿತಿ,ಎಚ್.ವಿನಯ ಆಚಾರ್ಯ,ಮ್ಯಾಕ್ಸಿಮ್ ಪಿಂಟೋ-ಪಕ್ಷೇತರರು.

ಮಂಗಳೂರು ನಗರ ದಕ್ಷಿಣ: ಡಿ.ವೇದವ್ಯಾಸ ಕಾಮತ್-ಬಿಜೆಪಿ, ಜೆ.ಆರ್.ಲೋಬೊ-ಕಾಂಗ್ರೆಸ್,ಕೆ.ಸಂತೋಷ್ ಕಾಮತ್-ಆಮ್ ಆದ್ಮಿ ಪಾರ್ಟಿ, ಸುಮತಿ ಎಸ್.ಹೆಗ್ಡೆ-ಜೆಡಿಎಸ್, ಧರ್ಮೇಂದ್ರ-ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ, ಸುಪ್ರಿತ್ ಕುಮಾರ್ ಪೂಜಾರಿ-ಜನಹಿತ ಪಕ್ಷ, ವಿನ್ನಿ ಪಿಂಟೋ-ಕರ್ನಾಟಕ ರಾಷ್ಟ್ರ ಸಮಿತಿ, ಕೆ.ಎಸ್.ಪೈ-ಪಕ್ಷೇತರ.

ಮಂಗಳೂರು: ಯು.ಟಿ.ಖಾದರ್-ಕಾಂಗ್ರೆಸ್,ಸತೀಶ್ ಕುಂಪಲ-ಬಿಜೆಪಿ,ಮುಹಮ್ಮದ್ ರಿಯಾಝ್-ಎಸ್‌ಡಿಪಿಐ,ಮುಹಮ್ಮದ್ ಅಶ್ರಫ್‌-ಆಮ್ ಆದ್ಮಿ ಪಾರ್ಟಿ,ದೀಪಕ್ ರಾಜೇಶ್ ಕುವೆಲ್ಲೋ-ಪಕ್ಷೇತರ.

LEAVE A REPLY

Please enter your comment!
Please enter your name here