ಬೆಟ್ಟಂಪಾಡಿ ಸ. ಪ್ರಥಮ ದರ್ಜೆ ಕಾಲೇಜು -ಹಣಕಾಸಿನ ಅರಿವು ಮುಖ್ಯ ಕಾರ್ಯಕ್ರಮ

0

ಹಣಕಾಸಿನ ಅರಿವು ಮುಖ್ಯ – ಗೀತಾ ವಿಜಯ್

ಪುತ್ತೂರು : ಇಂದಿನ ತಂತ್ರಜ್ಞಾನ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು ಅತ್ಯಂತ ಸರಳವಾಗಿದ್ದು ಎಲ್ಲರೂ ಆನ್ಲೈನ್ ವ್ಯವಹಾರವನ್ನು ಮೆಚ್ಚಿಕೊಂಡಿದ್ದಾರೆ ಆದರೆ ಯಾವುದೇ ಮಾಧ್ಯಮವಾದರೂ ಹಣಕಾಸಿನ ವ್ಯವಹಾರದಲ್ಲಿ ಅರಿವು ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ ನಾವುಗಳು ಮೋಸ ಹೋಗುವ ಸಂಭವವೇ ಹೆಚ್ಚು ಎಂದು ಪುತ್ತೂರಿನ ಆರ್ಥಿಕ ಸಾಕ್ಷರತಾ ಕೇಂದ್ರದ ಕೌನ್ಸಿಲರ್ ಗೀತಾ ವಿಜಯ್ ತಿಳಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಾಣಿಜ್ಯ ಸಂಘದ ವತಿಯಿಂದ ನಡೆದ ‘ಹಣಕಾಸಿನ ಅರಿವು’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಭವಿಷ್ಯದ ಆಗುಹೋಗುಗಳ ಬಗ್ಗೆ ಇಂದೇ ಯೋಚಿಸಿ ಉಳಿತಾಯ ಮಾಡುವುದು ಅಗತ್ಯ ಎಂದರಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಬಗೆಗೆ ಮತ್ತು ಬ್ಯಾಂಕುಗಳು ಒದಗಿಸುವ ವಿವಿಧ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಹರಿಪ್ರಸಾದ್ ಎಸ್ ಸ್ವಾಗತಿಸಿ, ಮಾತನಾಡಿ ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ಹಣಕಾಸಿನ ಅರಿವು ವಿಷಯವು ಪಠ್ಯಪೂರಕವೇ ಆಗಿದ್ದು, ಆಧುನಿಕ ಯುಗದಲ್ಲಿ ಎಲ್ಲರಿಗೂ ಹಣಕಾಸಿನ ಅರಿವು ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಂಧ್ಯಾಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here