ಸಂಪ್ಯದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿ: ಅಶೋಕ್ ರೈ


ಪುತ್ತೂರು; ಮಕ್ಕಳೇ ನಮ್ಮ ಸಂಪತ್ತು, ಮಕ್ಕಳಿಗಾಗಿ ನಾವು ಎಲ್ಲವನ್ನೂ ಸಹಿಸುತ್ತೇವೆ, ತ್ಯಾಗಗಳನ್ನು ಮಾಡುತ್ತೇವೆ ಆದರೆ ಅದೇ ಮಕ್ಕಳು ನಾಳೆ ದಾರಿ ತಪ್ಪಿದಾಗ ಅಥವಾ ಕಲಿತು ಉದ್ಯೋಗ ಇಲ್ಲವಾದಾಗ ನಾವೇ ಅದರ ನೋವನ್ನು ಅನುಭವಿಸಬೇಕಾಗುತ್ತದೆ , ಮಕ್ಕಳು ದಾರಿತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಷಕರದ್ದು , ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರೆಯುವಂತಾಗಲು ರಾಜ್ಯದಲ್ಲಿ , ದೇಶದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.


ನಮಗೆ ಧರ್ಮಗಳ ನಡುವಿನ ಜಗಳ, ದ್ವೇಷ ಬೇಡ. ನಮ್ಮ ಮಕ್ಕಳೂ ಅದಕ್ಕೆ ಬಲಿಯಾಗುವುದು ಬೇಡ. ಧರ್ಮ ಧರ್ಮಗಳ ನಡುವೆ ದ್ವೇಷದಿಂದ ಸಮಾಜಕ್ಕ ಗಳಿಸಿಕೊಳ್ಲುವಂತದ್ದು ಏನೂ ಇಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಒಂದಾಗಿ ಬಾಳಬೇಕು. ದೇಶದಲ್ಲಿ ಹಲವು ಧರ್ಮಳು, ಜಾತಿಯವರನ್ನೊಳಗೊಂಡ ಸುಂದರ ಹೂದೋಟ, ಈ ಹೂದೋಠ ಹಾಗೇಯೇ ಉಳಿಯಲಿ. ದೇಶದಲ್ಲಿ ಜಾತ್ಯಾತೀತ ಕಲ್ಪನೆ ಉಳಿದುಕೊಳ್ಳಬೇಕಾದರೆ ಹಿಂದೂ ಮುಸ್ಲಿಂ ಪರಸ್ಪರ ಒಟ್ಟಾಗಿರಬೇಕು. ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರ ಜೊತೆ ನಮ್ಮ ಮಕ್ಕಳು ಸೇರದಂತೆ ನಾವು ಜಾಗೃತರಾಗಬೇಕಿದೆ ಎಂದು ಹೇಳಿದರು.


ಪುತ್ತೂರು ನಗರವನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಶಾಸಕರು ಪ್ರಾರಂಭದಲ್ಲಿ ಹೇಳಿದ್ದರು ಆದರೆ ಅಭಿವೃದ್ದಿ ಮಾಡಿಲ್ಲ, ಕೇವಲ ಫ್ಲೆಕ್ಸ್ ಹಾಕಿದ್ದು ಮಾತ್ರ, ಬ್ರಹ್ಮ ನಗರದಲ್ಲಿ ೧೦೦ ಮನೆಗಳ ಫ್ಲ್ಯಾಟ್ ನಿರ್ಮಾಣ ಮಾಡುತ್ತೇವೆ ಎಂದವರಿಗೆ ಅಲ್ಲಿಗೆ ಸರಿಯಾದ ಮೂಲಭೂತ ಸೌಕರ್ಯವನ್ನು ಮಾಡಲು ಸಾಧ್ಯವಾಗಲಿಲ್ಲ. ಶಂಕುಸ್ಥಾಪನೆ ಮಾಡಿದ್ದು, ಫ್ಲೆಕ್ಸ್ ಹಾಕಿದ್ದು, ೪೦ ಪರ್ಸೆಂಟ್ ಕಮಿಷನ್ ತಗೊಂಡು ಜಾಲಿ ಮಾಡಿದ್ದು ಬಿಟ್ರೆ ಏನೇನೂ ಅಭಿವೃದ್ದಿ ಕೆಲಸ ಮಾಡಿಲ್ಲ. ಪುತ್ತೂರು ನಗರದಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ ಎಂದು ದೂರಿದರು. ಕಾಂಗ್ರೆಸ್ ಬೆಂಬಲಿಸಿ ನಾವು ಅಭಿವೃದ್ದಿ ಮಡಿ ತೋರಿಸುತ್ತೇವೆ ಎಂದು ರೈಗಳು ಸಭೆಗೆ ತಿಳಿಸಿದರು. ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಇದೆ. ಖಂಡಿತವಾಗಿಯೂ ನಿಮ್ಮೆಲ್ಲರ ಸಹಕಾರದಿಂದ ಪುತ್ತೂರಿನಲ್ಲಿ ಕಾಂಗ್ರೆಸ್ ಮತ್ತೆ ಇತಿಹಾಸವನ್ನು ನಿರ್ಮಾಣ ಮಾಡಲಿದೆ ಎಂದು ಭವಿಷ್ಯ ನುಡಿದರು.

ದೇಶಕಟ್ಟಿದ್ದು ಕಾಂಗ್ರೆಸ್ ಮಾರಿದ್ದು ಬಿಜೆಪಿ; ಮಹಮ್ಮದ್ ಬಡಗನ್ನೂರು
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಎಂದು ಕಾಂಗ್ರೆಸ್ಸನ್ನು ದೂರುವವನಿಗೂ ಗೊತ್ತಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಬಡವರಿಗೆ ಬದುಕಲು ಸಾಧ್ಯ ಎಂದು ಇಂದಿರಾಗಾಂಧಿಯನ್ನು, ನೆಹರೂ ಅವರನ್ನು ಹಿಯ್ಯಾಳಿಸುವವನಿಗೆ ಗೊತ್ತಿದೆ ಎಲ್ಲವೂ ಗೊತ್ತಿದ್ದು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುತ್ತಿರುವವರು ದೆಶದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.
ಹುಟ್ಟುವಾಗಲೇ ಚಿನ್ನದ ಚಮಚ ಬಾಯಿಗೆ ಇಟ್ಟುಕೊಂಡುಕೊಂಡು ಬಂದ ದೇಶದ ಜನರಿಗೋಸ್ಕರ ಅನೇಕ ವರ್ಷ ಜೈಲು ವಾಸ ಅನುಭವಿಸಿದರು. ಉಳುವವನಿಗೇ ಭೂಮಿಯನ್ನು ಕೊಟ್ಟ ಇಂದಿರಾಗಾಂಧಿಯನ್ನು ಗುಂಡಿಟ್ಟು ಕೊಂದರು, ಭಾರತವನ್ನು ವಿಶ್ವಗುರು ಮಾಡಲು ಹೊರ ರಾಜೀವ ಗಾಂಧಿ ದೇಶಕ್ಕಾಗಿ ರಕ್ತ ಸಾಕ್ಷಿಯಾದರು ಇವರೆಲ್ಲರ ತ್ಯಾಗದ ಫಲವಾಗಿ ಇಂದು ಭಾರತ ಕಂಗೊಳಿಸುತ್ತದೆ ವಿನಾ ಸಾರ್ವರ್ಕರ್ ಸಂತತಿಗಳಿಂದ ದೇಶ ಉದ್ದಾರ ಆಗಿಲ್ಲ. ಕಾಂಗ್ರೆಸ್ ಕಟ್ಟಿದ ಭವ್ಯ ಭಾರತವನ್ನು ಇಂದು ಅಧಿಕಾರದಲ್ಲಿರುವ ಬಿಜೆಪಿ ಒಂದೊಂದಾಗಿ ಮಾರಾಟ ಮಾಡುತ್ತಿದೆ. ದೇಶ ಉಳಿಯಬೇಕಾದರೆ ಬಿಜೆಪಿ ತೊಳಗಬೆಕು. ಬಿಜೆಪಿ ಮುಕ್ತ ಕರ್ನಾಟಕ, ಬಿಜೆಪಿ ಮುಕ್ತ ಭಾರತವಾಗುವಲ್ಲಿ ಪ್ರತೀಯೊಬ್ಬ ಪ್ರಜೆಯೂ ಚಿಂತಿಸಬೇಕಿದೆ. ಕಾಂಗ್ರೆಸ್ ಬೆಂಬಲಿಸುವ ಮೂಲಕ ನಾವು ಹಿರಿಯರ ತ್ಯಾಗಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಶಾಸಕರಾದವರಿಗೆ ನೈತಿಕತೆ ಬೇಕು
ಚುನಾವಣೆಗೆ ಎಲ್ಲರಿಗೂ ಸ್ಪರ್ದಿಸಬಹುದು ಆದರೆ ಆತನಿಗೆ ಕನಿಷ್ಟ ನೈತಿಕತೆಯಾದರೂ ಬೇಕಾಗುತ್ತದೆ. ನೈತಿಕತೆಯಲ್ಲಿ ಬಲಹೀನನಾದವನಿಗೆ ಜನರ ಸೇವೆಯನ್ನು ಹೇಗೆ ಮಾಡಲು ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ಇದೇ ಕಾರಣಕ್ಕೆ ಟಿಕೆಟ್ ಕೊಡಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಜನಪ್ರತಿನಿಧಿಯಾದವರು ಚುನಾವಣೆ ಸಂದರ್ಬದಲ್ಲಿ ತಮ್ಮ ಬಂಡವಾಳ ಬಯಲು ಆಗದಂತೆ ನ್ಯಾಯಾಲಯದಿಂದ ಸ್ಟೇ ಆರ್ಡರ್ ತರುತ್ತಿರುವುದು ನೈತಿಕತೆ ಕುಸಿದಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಸೇರ್ಪಡೆ
ಇದೇ ಸಂಧರ್ಭದಲ್ಲಿ ಬಿಜೆಪಿ ಮುಖಂಡ, ಆರ್ಯಾಪು ಗ್ರಾಪಂ ಮಾಜಿ ಸದಸ್ಯ ಜಬ್ಬಾರ್ ಸಂಪ್ಯ ತಮ್ಮ ಅಭಿಮಾನಿಗಳ ಜೊತೆಗೆ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಎಂ ಎಸ್ ಮಹಮ್ಮದ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ಪ್ರಸನ್ನ ಶೆಟ್ಟಿ ಸಿಝ್ಲರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here