ಪುತ್ತೂರು; ಪತಿಯ ಯಶಸ್ವಿನ ಹಿಂದೆ ಪತ್ನಿ ಇದ್ದೇ ಇರ್ತಾಳಂತೆ.ತನ್ನ ಪತಿ ಚುನಾವಣೆಗೆ ನಿಂತಿದ್ದು ಹೇಗಾದರೂ ಮಾಡಿ ಅವರನ್ನು ಗೆಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರ ಪತ್ನಿ ಸುಮಾ ಎ ರೈ ಕಳೆದ ಒಂದು ವಾರದಿಂದ ಚುನಾವಣಾ ಖಾಡಕ್ಕೆ ಇಳಿದಿದ್ದಾರೆ. ಕಾಲಿಗೆ ಚಕ್ರ ಕಟ್ಟಿ ಗ್ರಾಮ ಗ್ರಾಮಗಳಿಗೆ ತೆರಳಿ ಮಹಿಳೆಯರ ತಂಡವನ್ನು ಕಟ್ಟಿ ಮನೆಗೆ ಮನೆಗೆ ಭೇಟಿ ನೀಡಿ ಪತಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಸುಮಾ ಎ ರೈ ಅವರ ಪಾಲಿಗೆ ಇದು ಮೊದಲನೇ ಚುನಾವಣಾ ಪ್ರಚಾರ ಆಗಿದ್ದು ಕಾಂಗ್ರೆಸ್ ಗೆಲ್ಲಿಸಿ ಎಂದು ಹಳ್ಳಿ ಕಡೆ ಹೆಜ್ಜೆ ಹಾಕಿದ್ದಾರೆ. ಇವರ ತಂಡದ ಜೊತೆಯಲ್ಲಿ ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ,ನಯನಾ ರೈ ನೆಲ್ಲಿಕಟ್ಟೆ ಹಾಗೂ ಅಶೋಕ್ ರೈ ಸಹೋದರಿಯರೂ ಇದ್ದಾರೆ. ಈಗಾಗಲೇ ಅರಿಯಡ್ಕ, ಕೆದಂಬಾಡಿ, ಕೆಯ್ಯೂರು, ನೆಟ್ಟಣಿಗೆ ಮುಡ್ನೂರಿನ ವಿವಿಧ ಮನೆಗಳಿಗೆ ಭೇಟಿ ಕಾರ್ಯ ಪೂರ್ಣಗೊಂಡಿದೆ. ಪತಿ ಮಾಡಿದ ಸಮಾಜ ಸೇವೆಯಿಂದ ಸುಮಾ ಎ ರೈ ಹೋದಲ್ಲೆಲ್ಲಾ ಬಾರೀ ಗೌರವವೂ ದೊರೆಯುತ್ತಿದ್ದು ಈ ಬಾರಿ ಗೆದ್ದೇ ಗೆಲ್ತಾರೆ ನಾವು ಓಟು ಹಾಕುತ್ತೇವೆ ಎಂಬ ಭರವಸೆಯನ್ನೂ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಅಶೋಕ್ ರೈ ಗೆಲುವಿಗೆ ಪತ್ನಿ ಓಡಾಟ ಮಾಡುತ್ತಿದ್ದರೆ ಗ್ರಾಮದ ಗಲ್ಲಿಗಳಲ್ಲಿ ಕಾರ್ಯಕರ್ತರ ಪಡೆಯೂ ಮತ ಭೇಟೆಯಲ್ಲಿ ತೊಡಗಿಸಿಕೊಂಡಿದೆ.